ಬಿಜೆಪಿ ಕಚೇರಿಯಿಂದ ಜಗದೀಶ್ ಶೆಟ್ಟರ್ ಭಾವಚಿತ್ರ ತೆರವು

IMG-20230417-WA0069.jpg
Published on

ದಾವಣಗೆರೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಡೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿದ್ದ ಶೆಟ್ಟರ್ ಅವರ ಭಾವಚಿತ್ರವನ್ನು ಸೋಮವಾರ ರಾತ್ರಿ ಕೆಳಗಿಳಿಸಿದ ಕಾರ್ಯಕರ್ತರು ಕಚೇರಿ ಎದುರು ದಹಿಸಿದರು. ಶೆಟ್ಟರ್ ವಿರುದ್ಧ ಧಿಕ್ಕಾರ ಕೂಗಿದರು.

ದಾವಣಗೆರೆ ಉತ್ತರ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಗುಜರಾತ್‌ನ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಜೀತುಬಾಯ್ ವಾಗನಿಯ ಸಮ್ಮುಖದಲ್ಲಿ ಅವರ ಸೂಚನೆಯಂತೆ ಪಕ್ಷದ ಕಚೇರಿಯಿಂದ ಶೆಟ್ಟರ್ ಭಾವಚಿತ್ರ ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗುಜರಾತ್‌ನ ಮಾಜಿ ಶಾಸಕ ಕಾಂತಿಲಾಲ್ ಅಮೃತೀಯ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಜಗದೀಶ್, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಪಾಲಿಕೆ ಸದಸ್ಯ ಕೆ.ಪ್ರಸನ್ನಕುಮಾರ್, ಕೆ.ಆರ್.ಶಿವಾನಂದ್, ಉತ್ತರ ಮಂಡಲ ಅಧ್ಯಕ್ಷ ಬಿ.ಜಿ.ಸಂಗನಗೌಡ್ರು, ಚ್.ಎನ್.ಶಿವಕುಮಾರ್, ಬಸವರಾಜಯ್ಯ, ರಾಜು ಶಾಮನೂರು, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಕೊಟ್ರೇಶಗೌಡ ಇತರರಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net