

ಕೊಳ್ಳೇಗಾಲ: ಪಟ್ಟಣದ ಚೌಡೇಶ್ವರಿ ಮಿನಿ ಕಲ್ಯಾಣ ಮಂಟಪದಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಎಸ್ಸಿ ಮೋರ್ಚಾ ಸಭೆ ನಡೆಸಲಾಯಿತು.ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಮೈಸೂರು ಭಾಗದ ಎಲ್ಲರೂ ವಿಧಾನಸಭೆಯಲ್ಲಿ ಎಸ್ಸಿ ಮೋರ್ಚಾ ಸಭೆ ನಡೆಸುತ್ತಿದ್ದೇವೆ. ಅಂತೆಯೇ ಕೊಳ್ಳೇಗಾಲ ವಿಧಾನ ಸಭೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಭಾರತೀಯ ಜನತಾ ಪಾರ್ಟಿ ಕಟ್ಟುವ ನಿಟ್ಟಿನಲ್ಲಿ ಎಸ್ಸಿ ಮೋರ್ಚಾ ಸದಸ್ಯರು ಯಾವ ರೀತಿ ಹೇಗೆ ಕೆಲಸ ಮಾಡಬೇಕು. ಬಿಜೆಪಿಗೆ ನಮ್ಮ ವಿರೋಧಿ ಪಕ್ಷಗಳು ಹಚ್ಚುವ ಕಳಂಕವನ್ನು ದೂರ ಮಾಡಬೇಕು. ಬಿಜೆಪಿ ವಿರುದ್ಧವಾಗಿ ಮಾತನಾಡುತ್ತಿರುವುದು ಸುಳ್ಳು ಎಂಬುದನ್ನು ಮನವರಿಕೆ ಮಾಡುವ ಮೂಲಕ ಪಕ್ಷ ಸಂಘಟನೆ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಕ್ಷೇತ್ರದ ಎರಡು ಮಂಡಲ ಎಸ್ಸಿ ಮೋರ್ಚಾ ಸಭೆ ನಡೆಸಿದ್ದೇವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಲಿತರಿಗೆ ಏನೆಲ್ಲ ಯೋಜನೆ ತಂದಿದೆ. ಬಡವರ ಪರ ಯಾವೆಲ್ಲ ಕಾರ್ಯಕ್ರಮ ಕೊಟ್ಟಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಕಾಂಪೋಸ್ಟ್ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ರೇವಣ್ಣ ಟಗರಪುರ, ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಮಹೇಶ್, ಲೋಕೇಶ್ ಇದ್ದರು.