

ಚಾಮರಾಜನಗರ: ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದ ನಾಗರಾಜು ಮನೆಗೆ ಕೆಆರ್‌ಐಡಿಎಲ್ ಅಧ್ಯಕ್ಷ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಂ.ರುದ್ರೇಶ್ ಗುರುವಾರ ಭೇಟಿ ಸಾಂತ್ವನ ಹೇಳಿದರು.
ಸೆಸ್ಕಾಂ ನಿಗಮದ ಮುಖ್ಯ ವ್ಯವಸ್ಥಾಪಕ ಜಯವಿಭವಸ್ವಾಮಿ ಅವರಿಗೆ ಕರೆ ಮಾಡಿ ರೈತ ನಾಗರಾಜು ಕುಟುಂಬಕ್ಕೆ ನಿಗಮ ಹಾಗು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಕ್ಷಣದಲ್ಲಿಯೇ ಕಲ್ಪಿಸಬೇಕು ಎಂದು ಹೇಳಿದರು. ಮೃತ ನಾಗರಾಜು ಅವರಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರಿ ಈಗಾಗಲೇ ಮದುವೆಯಾಗಿದ್ದು, ಇನ್ನೋರ್ವ ಪುತ್ರಿಯ ವಿವಾಹವಾಗ ಬೇಕಾಗಿದೆ. ಕುಟುಂಬದ ಆಧಾರ ಸ್ತಂಭವೇ ಹೋಗಿದೆ. ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು. ವೈಯಕ್ತಿಕವಾಗಿ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ ರುದ್ರೇಶ ಅವರು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ನಲ್ಲೂರು, ಜ್ಯೋತಿಗೌಡನಪುರ, ಕಾಗಲವಾಡಿ, ಕಾಗಲವಾಡಿ ಮೋಳೆ, ಅಮ್ಮನಪುರ ಗ್ರಾಮಗಳಿಗೆ ಭೇಟಿ ನೀಡಿ ಮತದಾರರನ್ನು ಮಾತನಾಡಿಸಿದರು. ಮುಖಂಡರಾದ ಮೂಡ್ಲುಪುರ ನಂದೀಶ್, ಸುದರ್ಶನ್, ಭೃಂಗೇಶ್, ಪ್ರಮೋದ್, ನಲ್ಲೂರು ಶಿವರುದ್ರ, ಕೆಸ್ತೂರು ಬಸವಣ್ಣ, ಹೊಟೇಲ್ ಗಣೇಶ್, ರುದ್ರೇಶ್, ರಘು, ಕಾಗಲವಾಡಿ ಗ್ರಾ.ಪಂ. ಸದಸ್ಯರಾದ ಪ್ರವೀಣ್, ಜ್ಯೋತಿ ಮತ್ತು ಇತರರು ಹಾಜರಿದ್ದರು.