ಬಿಜೆಪಿ ಅವಧಿಯ ಕಳಪೆ ಕಾಮಗಾರಿಗಳ ತನಿಖೆ -ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿಕೆ

dvg-ssm_20230709002853922.jpg
Published on

ದಾವಣಗೆರೆ: ದಾವಣಗೆರೆ ಎಪಿಎಂಸಿ ಬಳಿ ನಿವೇಶನ ಮಾಡಿ ಹಂಚಿಕೆ ಮಾಡಿರುವುದು, ಕುಂದುವಾಡ ಕೆರೆ ಹೂಳೆತ್ತುವುದು ಸೇರಿ ಬಿಜೆಪಿ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಕಳಪೆ ಕಾಮಗಾರಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಂದುವಾಡ ಕೆರೆ ಕಾಮಗಾರಿಗೆ ನಮ್ಮ ಅವಧಿಯಲ್ಲಿ 3 ಕೋಟಿ ರೂ. ಬಳಸಿದ್ದೆವು. ಆದರ ಬಿಜೆಪಿಯವರು 13 ಕೋಟಿ ರೂ. ಬಳಸಿದ್ದಾಗಿ ಹೇಳುತ್ತಿದ್ದಾರೆ. ಇನ್ನು 2-3 ತಿಂಗಳಲ್ಲಿ ತನಿಖೆಯ ವಿವರ ತಿಳಿದುಬರಲಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸಿದ್ದೇಶ್ವರ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಶಾಮನೂರು ಶಿವಶಂಕರಪ್ಪನವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್ಸೆಸ್ಸೆಂ, ಕಾಂಗ್ರೆಸ್ಸಿನದ್ದೂ ಅದೇ ಗುರಿಯಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಡವರಿಗೆ ಮದ್ಯಮ ವರ್ಗದವರಿಗೆ ಅನುಕೂಲವಾಗುವ ಬಜೆಟ್ ಆಗಿದೆ. ಜಿಲ್ಲೆಗೆ ಹಿಂದೆ ನಾವು ಮಾಡಿದ ಘೋಷಣೆ ಮಾಡಿದ್ದ ಯೋಜನೆಗಳನ್ನು ಬಿಜೆಪಿ ಸ್ಥಗಿತ ಮಾಡಿತ್ತು. ನಾವದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net