ಬಿಜೆಪಿ ಅಲುಗಾಡಿಸಲು ಸಾಧ್ಯವಿಲ್ಲ

25kgl photo 1
ಕೊಳ್ಳೇಗಾಲ ಪಟ್ಟಣದ ಬಾಪುನಗರದಲ್ಲಿ ಬಿಜೆಪಿ ಮುಖಂಡರು ಪಕ್ಷದ ಅಭ್ಯರ್ಥಿ ನಾಗಸುಂದ್ರಮ್ಮ ಪರವಾಗಿ ಮತಯಾಚನೆ ಮಾಡಿದರು.
Published on

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಹೇಳಿಕೆ

ಕೊಳ್ಳೇಗಾಲ: ಗಟ್ಟಿಯಾಗಿ ನೆಲೆಯೂರಿರುವ ಬಿಜೆಪಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಹೇಳಿದರು.

ನಗರಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ 26ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ನಾಗಸುಂದ್ರಮ್ಮ ಹಾಗೂ 2ನೇ ವಾರ್ಡ್‌ನ ನಾಗಮಣಿ ಪರವಾಗಿ ಮತಯಾಚಿಸಿ ಮತನಾಡಿದರು. ವಿಧಾನಸಭೆಯಲ್ಲಿ 125ಕ್ಕೂ ಹೆಚ್ಚು ಬಿಜೆಪಿ ಶಾಸಕರಿದ್ದು. ಪಾರ್ಲಿಮೆಂಟ್‌ನಲ್ಲೂ ಹೆಚ್ಚಿನ ಸದಸ್ಯರಿದ್ದಾರೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶ ಒಳ್ಳೆಯ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ವಿಧಾನಸಭೆಯೊಳಗೆ ಧ್ವನಿ ಎತ್ತಿದ್ದು ಶಾಸಕ ಎನ್.ಮಹೇಶ್. ಒಳ ಮೀಸಲಾತಿ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ನವೆಂಬರ್‌ನಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ ಎಂದರು.

ದೇಶದ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಬೇರೆ ಪಕ್ಷಕ್ಕೆ ಮತ ನೀಡಿ ಅದನ್ನು ವ್ಯರ್ಥ ಮಾಡುವುದು ಬೇಡ. ಉಪಚು ನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಶಾಸಕ ಎನ್.ಮಹೇಶ್ ಮಾತನಾಡಿ, 2ನೇ ವಾರ್ಡ್‌ನ ಅಭ್ಯರ್ಥಿ ನಾಗಮಣಿ ಅವರನ್ನು ಮತದಾರರು ಆಶೀರ್ವದಿಸಬೇಕು. ಅಂತೆಯೇ 26ನೇ ವಾರ್ಡ್‌ನಿಂದ ಸ್ಪರ್ಧಿಸಿರುವ ನಾಗಸುಂದ್ರಮ್ಮ ಕಳೆದ ಚುನಾವಣೆಯಲ್ಲಿ ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಇದೊಂದು ದಾಖಲೆ ಗೆಲುವು. ಅದರಂತೆ ಶಂಕನಪುರ ಹಾಗೂ ಬಾಪುನಗರ ಮತದಾರರು ಈ ಬಾರಿಯೂ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ. ನಾಗಸುಂದ್ರಮ್ಮ ಗೆಲುವು ಸಾಧಿಸಿದ ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ನಗರ ಮಂಡಲ ಅಧ್ಯಕ್ಷ ಲಕ್ಷ್ಮೀಪತಿ, ನಗರಸಭೆ ಸದಸ್ಯೆ ಕವಿತಾ, ಪಕ್ಷದ ಮುಖಂಡ ಜಗದೀಶ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net