

ಬೆಳಗಾವಿ: ಭಾರತೀಯ ಜನತಾ ಪಕ್ಷದ 42ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮಹಾನಗರ ಬಿಜೆಪಿ ಘಟಕದ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಬುಧವಾರ ಸಂಭ್ರಮಾಚರಣೆ ಜರುಗಿತು.
ಬೆಳಗ್ಗೆ 9:30ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಗಾರ್ಡನ್‌ನಿಂದ ಆರಂಭವಾದ ಬಿಜೆಪಿ ರ‌್ಯಾಲಿಯು ಸಿ.ಎಲ್. ರಸ್ತೆ ಮಾರ್ಗದಿಂದ ಬೆಳಗಾವಿ ಮಹಾನಗರ ಕಾರ್ಯಾಲಯಕ್ಕೆ ತಲುಪಿತು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸ್ಥಾಪನಾ ದಿನದ ಬಗ್ಗೆ ಹಾಗೂ ಪಕ್ಷ ಬೆಳೆದು ಬಂದ ಹಾದಿ ಕುರಿತು, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು.
ಬೆಳಗಾವಿ ಮಹಾನಗರ ಕಾರ್ಯಾಲಯ ಎದುರಿನ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಕ್ಷದ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ, ಬೆಳಗಾವಿ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಎಂ.ಸಿ., ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಬೆಳಗಾವಿ ನಗರ ಪ್ರಭಾರಿ ರಮೇಶ ದೇಶಪಾಂಡೆ, ರಾಜ್ಯ ವಕ್ತಾರ ಎಂ.ಬಿ.ಝಿರಲಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಬೆಳಗಾಂವಕರ, ಕರ್ನಾಟಕ ಒಳಚರಂಡಿ, ನೀರು ಸರಬರಾಜು ನಿಗಮದ ನಿರ್ದೇಶಕಿ ದೀಪಾ ಕುಡಚಿ, ಮಹಾನಗರ ಪ್ರಧಾನ ಕಾರ್ಯದರ್ಶಿ ಮುರುೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ, ಮಹಾನಗರ ಮಾಧ್ಯಮ ಪ್ರಮುಖ ಶರದ ಪಾಟೀಲ, ಸಹ ಪ್ರಮುಖ, ಪ್ರಜ್ವಲ ಅಥಣಿಮಠ, ಬೆಳಗಾವಿ ಮಹಾನಗರ ವಕ್ತಾರ ಪ್ರಭು ಹೂಗಾರ, ಬೆಳಗಾವಿ ಉತ್ತರ ಮಂಡಲದ ಅಧ್ಯಕ್ಷ ವಿಜಯ ಕೊಡಗಾನೂರ, ಮಹಾನಗರ ಯುವ ಮೋರ್ಚಾ ಅಧ್ಯಕ್ಷ ಪ್ರಸಾದ ದೇವರಮನಿ, ಉತ್ತರ ಮಂಡಲ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟಪ್ಪಣ್ಣವರ, ಮಹಾನಗರ ಪದಾಧಿಕಾರಿಗಳು, ಮಹಾನಗರ ಮೋರ್ಚಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಇದ್ದರು.