ಬಿಜೆಪಿ 3ನೇ ಸ್ಥಾನಕ್ಕೆ ಬರಲಿದೆ

ibrahim
Published on

ಹುಬ್ಬಳ್ಳಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾನಕ್ಕೆ ತಳ್ಳಲ್ಪಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ಗೆ 40 ಸ್ಥಾನ ಬರವುದು ಕಷ್ಟವಾಗಲಿದೆ. ಈ ಎರಡು ಪಕ್ಷಗಳ ಅಧಿಕಾರ ನೋಡಿ ಬೇಸತ್ತಿರುವ ಜನರು ಜೆಡಿಎಸ್​ಅನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.

ಸದಾನಂದಗೌಡ ಸೇರಿ 12 ಜನರ ಸಿಡಿ ಹೊರಗೆ ಬರಬೇಕು. 13ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ರಚನೆ ಮಾಡಿದ್ದಾರೆ. ಇವರಲ್ಲಿ 12 ಜನ ಮಂತ್ರಿಯಾಗಿದ್ದಾರೆ. ಈ ಕುರಿತು ಸಿಬಿಐ ತನಿಖೆ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net