

ಚಿಕ್ಕೋಡಿ: ಮಹಾರಾಷ್ಟ್ರದ ಮಿರಜ್ ಪಟ್ಟಣದ ಸಂಜಯ ಬೋಕರೆ ಗ್ರೂಪ್ ಆನ್ ಇನ್‌ಸ್ಟಿಟ್ಯೂಟ್ಸ್ನಲ್ಲಿ ಎಂಬಿಎ ವಿಭಾಗ ವತಿಯಿಂದ ಈಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಎಂಪಾಯರ್ ೨೦೨೫ರ ಬಿಜಿನೆಸ್ ಪ್ಲ್ಯಾನ್ ಸ್ಪರ್ಧೆಯಲ್ಲಿ ಪಟ್ಟಣದ ಕೆಎಲ್‌ಇ ಇಂಜೀನಿಯರಿಂಗ್ ಕಾಲೇಜಿನ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ವಿನಾಯಕ ಭರಮೆ ಪ್ರಥಮ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.