ಬಿಗಿ ಬಂದೋಬಸ್ತ್​ನಲ್ಲಿ ಭಾಗಶಃ ದರ್ಗಾ ತೆರವು

h21-Darga 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬಿಆರ್​ಟಿಎಸ್ ಕಾರಿಡಾರ್ ಯೋಜನೆ ಭೂಸ್ವಾಧೀನಕ್ಕಾಗಿ ನಗರದ ಭೈರಿದೇವರಕೊಪ್ಪ ಬಳಿಯ ಸೈಯದ್ ಮೆಹಮೂದ್​ಶಹಾ ಖಾದ್ರಿ ದರ್ಗಾದ ಒಂದು ಭಾಗ ಹಾಗೂ ಕೆಲ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಬುಧವಾರ ಬೆಳಗ್ಗೆ ನಡೆಯಿತು.

ರಸ್ತೆ ನಿರ್ವಣಕ್ಕಾಗಿ 44 ಮೀ. ಭೂಸ್ವಾಧೀನ ಪಡಿಸಿಕೊಳ್ಳಲು ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಬಿಆರ್​ಟಿಎಸ್, ಜಿಲ್ಲಾಡಳಿತ ಹಾಗೂ ಪೊಲೀಸರ ಸಹಕಾರ ಕೋರಿತ್ತು. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ತೆರವು ಕಾರ್ಯಾಚರಣೆ ನಡೆಯಿತು. ಮೊದಲು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ನಂತರ ದರ್ಗಾ ಸುತ್ತಲಿನ ಕಾಂಪೌಂಡ್ ಹಾಗೂ ಮೇಲ್ಛಾವಣಿಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಮಾಡಲಾಯಿತು. ಒಟ್ಟು 1 ಗುಂಟೆ ನಾಲ್ಕಾಣೆ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ.

ದರ್ಗಾದಲ್ಲಿನ 3 ಗೋರಿಗಳ ಸ್ಥಳಾಂತರಕ್ಕೆ ಮುಸ್ಲಿಂ ಮುಖಂಡರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಹಕಾರ ನೀಡುವುದಾಗಿ ಹೇಳಿದೆ. ಆದರೂ ಇದಕ್ಕೆ ಅಂಜುಮನ್ ಎ ಇಸ್ಲಾಂ ಸಂಸ್ಥೆ ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಧರ್ಮಗುರುಗಳು ಅಲ್ಲಿ ಜೀವಂತ ಸಮಾಧಿ ಹೊಂದಿದ್ದು, ಆದ್ದರಿಂದ ಭಾವನಾತ್ಮಕ ಸಂಬಂಧ ಇರುವ ಈ ಪ್ರದೇಶವನ್ನು ಬಿಡಬೇಕಿತ್ತು ಎಂದಿದ್ದಾರೆ. ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಹಿಂದು-ಮುಸ್ಲಿಮರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ್ಗಾ ಕಮಿಟಿಯವರಿಗೆ 2020ರ ಮಾರ್ಚ್​ನಲ್ಲಿ ಅಂತಿಮ ನೋಟಿಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಮಿಟಿಯವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಡಿ. 16ರಂದು ಕಮಿಟಿಯ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ರಸ್ತೆ ನಿರ್ವಣಕ್ಕಾಗಿ 44 ಮೀ. ಭೂಸ್ವಾಧೀನ ಪಡಿಸಿಕೊಳ್ಳಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಬಿಆರ್​ಟಿಎಸ್ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಪೊಲೀಸರ ಸಹಕಾರ ಕೋರಿದ್ದರು. ಒಟ್ಟು 1 ಗುಂಟೆ ನಾಲ್ಕಾಣೆ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು. 3 ಗೋರಿ ಸ್ಥಳಾಂತರವನ್ನು ಅವರ ಪದ್ಧತಿಯಂತೆ ಮಾಡಿಕೊಳ್ಳಲಿ. ಯಂತ್ರೋಪಕರಣ ಹಾಗೂ ಕಾರ್ವಿುಕರನ್ನು ನಾವು ಕೊಡುತ್ತೇವೆ.

| ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net