ಶನಿವಾರಸಂತೆ: ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಬುಧವಾರ ಮುಷ್ಕರ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ-ಕಾಲೇಜು, ಕಚೇರಿಗಳು ಬಂದ್ ಆಗಿದ್ದವು.
ನೌಕರರು ಕಚೇರಿಗೆ ಬಾರದೆ ಮುಷ್ಕರಕ್ಕೆ ಬೆಂಬಲ ನೀಡಿದರು. ಆಸ್ಪತ್ರೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳ ಬಾಗಿಲು ತೆರೆದಿದ್ದರೂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಶನಿವಾರಸಂತೆ ಪಟ್ಟಣದ ನಾಡ ಕಚೇರಿಯ ಬಾಗಿಲು ತೆರೆದಿದ್ದರೂ ಕಚೇರಿಯ ದಿನಗೂಲಿ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು.
ನಿವಾರಸಂತೆ, ದುಂಡಳ್ಳಿ, ಆಲೂರು ಸಿದ್ದಾಪುರ, ನಿಡ್ತ, ಹಂಡ್ಲಿ ಗ್ರಾಪಂ ಕಚೇರಿಗಳಲ್ಲಿ ದಿನಗೂಲಿ ನೌಕರರು, ನೀರುಗಂಟಿ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಪಿಡಿಒ, ಕಾರ್ಯದರ್ಶಿ ಗೈರಾಗಿದ್ದರು. ಪೊಲೀಸ್ ಠಾಣೆ, ಅರಣ್ಯ ಇಲಾಖೆ ಹೊರತುಪಡಿಸಿ ಎಲ್ಲ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು.