ಬಿಕೋ ಎನ್ನುತ್ತಿರುವ ಜಾನುವಾರು ಸಂತೆ

h4- Catle 2
Published on

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಶನಿವಾರ ನಡೆಯುವ ಜಾನುವಾರು ಸಂತೆ ಖಾಲಿಖಾಲಿಯಾಗಿತ್ತು.

ಕರೊನಾ ಸೋಂಕಿನ ಭಯ, ಲಾಕ್​ಡೌನ್ ನಂತರವೂ ಆತಂಕ ಇತ್ಯಾದಿಗಳ ಮಧ್ಯೆ ತಿಂಗಳ ಹಿಂದೆ ಪುನಾರಂಭವಾಗಿದ್ದರೂ ಜಾನುವಾರು ಸಂತೆ ಮಾತ್ರ ಈಗಲೂ ಕಳೆಗುಂದಿದಂತಿದೆ.

ಲಾಕ್​ಡೌನ್ ಸಂದರ್ಭದಲ್ಲಿ ಮೂರು ತಿಂಗಳು ಜಾನುವಾರು ಸಂತೆ ಬಂದ್ ಇಡಲಾಗಿತ್ತು. ಆದರೆ, ಈಗ ಲಾಕ್​ಡೌನ್ ಇಲ್ಲದಿದ್ದರೂ ಮೊದಲಿನ ಸ್ಥಿತಿಯೇ ಮುಂದುವರಿದಿದೆ. ಕಳೆದೊಂದು ತಿಂಗಳಿಂದ ಪ್ರತಿ ಶನಿವಾರ ಮಂದಗತಿಯಲ್ಲಿಯೇ ಸಂತೆ ನಡೆಯುತ್ತಿದೆ.

ಎತ್ತು, ಹೋರಿಗಳು ಹೆಚ್ಚು ಕಾಣುತ್ತಿಲ್ಲ. ಏನಿದ್ದರೂ ಆಕಳು, ಎಮ್ಮೆಗಳೇ ಹೆಚ್ಚಾಗಿ ಕಂಡು ಬರುತ್ತಿದ್ದು, ಅವುಗಳ ವ್ಯಾಪಾರವೂ ಅಷ್ಟಾಗಿ ನಡೆಯುತ್ತಿಲ್ಲ.

ಜರ್ಸಿ, ಎಚ್​ಎಫ್, ದೇಸೀ ತಳಿಯ ಆಕಳುಗಳು, ಎಮ್ಮೆಗಳ ವ್ಯಾಪಾರವನ್ನು ಕೆಲವರು ನಡೆಸುತ್ತಿದ್ದಾರೆ.

ಕರೊನಾ ರೋಗ ಭಯ, ದನಗಳ ಸಂಖ್ಯೆ ಕಡಿಮೆಯಾಗಿರುವ ಕಾರಣಕ್ಕೊ ಏನೋ ಜಾನುವಾರು ಸಂತೆಯಲ್ಲಿ ಮೊದಲಿನ ದಟ್ಟಣೆ ಕಂಡು ಬರುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net