ಬಿಕಾಂನಲ್ಲಿ ಕೂಲಿಕಾರ್ಮಿಕನ ಮಗಳ ಸಾಧನೆ

ಫಿರ್ಧೋಸ್
ಫಿರ್ಧೋಸ್
Published on

ಎಚ್.ಡಿ.ಕೋಟೆ: ಮೈಸೂರು ವಿಶ್ವವಿದ್ಯಾಲಯದ ಬಿಕಾಂ ಪದವಿ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಕೂಲಿಕಾರ್ಮಿಕನ ಮಗಳು ಸಾಧನೆ ಮಾಡಿದ್ದಾಳೆ.

ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿದ್ದ ಅಂತರಸಂತೆ ಗ್ರಾಮದ ಫಿರ್ದೋಸ್ ವಾಣಿಜ್ಯ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ತಾಲೂಕಿನ ಅಂತರಸಂತೆ ಗ್ರಾಮದ ನಿವಾಸಿಗಳಾದ ಮುನೀರ್ ಅಹಮದ್ ಮತ್ತು ನಫ್ರೀನ್ ತಾಜ್ ದಂಪತಿ ಪುತ್ರಿ. ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ದಂಪತಿ, ಸಂಕಷ್ಟಗಳ ನಡುವೆಯೂ ಮಗಳ ಓದಿಗೆ ಬೆನ್ನೆಲುಬಾಗಿದ್ದರು. ಪಾಲಕರಿಗೆ ನೀಡಿದ ಮಾತಿನಂತೆ ಛಲ ಬಿಡದೆ ಓದಿ ಅತ್ಯುತ್ತಮ ಅಂಕ ಗಳಿಸಿದ್ದಾಳೆ. ಮೈಸೂರು ವಿವಿಯ 103ನೇ ಘಟಿಕೋತ್ಸವದಲ್ಲಿ ಗಣ್ಯರಿಂದ ಚಿನ್ನದ ಪದಕ ಸ್ವೀಕರಿಸಲಿದ್ದಾರೆ.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಜೆ.ಎನ್.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net