ಬಿಕಾಂ ಪರೀಕ್ಷೆ ಬರೆದ ನವವಧು

22-KGL-3,,,,
Published on

 ಕೊಳ್ಳೇಗಾಲ: ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ವಧು ತಾಳಿ ಕಟ್ಟಿಸಿಕೊಂಡ ಬಳಿಕ ಹಸಮಣೆಯಿಂದ ನೇರವಾಗಿ ಪರೀಕ್ಷೆ ಕೊಠಡಿಗೆ ಆಗಮಿಸಿ ಬಿಕಾಂ ಪರೀಕ್ಷೆ ಬರೆದಿದ್ದಾರೆ.

ವಾಸವಿ ಸಂಯುಕ್ತ ಕಾಲೇಜಿನ ತೃತೀಯ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಪಟ್ಟಣದ ಲಿಂಗಣಾಪುರ ಬಡಾವಣೆಯ ರಾಜಪ್ಪ (ಮಂಟೇಶ ) ಮತ್ತು ಅನುಸೂಯ ದಂಪತಿ ಪುತ್ರಿ ಆರ್. ಸಂಗೀತಾ ಬಿಕಾಂ ಪರೀಕ್ಷೆ ಬರೆದಿದ್ದಾರೆ. ನಂಜನಗೂಡಿನ ಸಿಂಧೂವಳ್ಳಿ ಗ್ರಾಮದ ಯೋಗೇಶ್ ಎಂಬುವರ ಜತೆ ಸಂಗೀತಾ ವಿವಾಹ ಮೇ.22 ರಂದು ನಿಶ್ಚಯವಾಗಿತ್ತು. ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ಚರಿ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದ ಬಳಿಕ ವಧು ಪರೀಕ್ಷೆಗೆ ಹಾಜರಾಗಿರುವುದು ಎಲ್ಲರ ಹುಬ್ಬೇರಿಸುವಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net