ಬಿಎಸ್‌ಎಫ್ ಯೋಧನ ತಾಯಿಯ ಕೊಲೆಗೆ ಖಂಡನೆ

21MDLG2
ಮೂಡಲಗಿ ತಾಲೂಕು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿ ಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಅರ್ಜುನ ಕೋಲೂರ, ಮಹಾಲಿಂಗ ಬಬಲಿ, ಭೀಮಪ್ಪ ಪಾಟೀಲ, ಸುರೇಶ ಅಂಗಡಿ, ಇಬ್ರಾಹಿಂ ನದ್ಾ, ಸಂಗೀತಾ ಬಾಗಿಮನಿ, ಮಹಾದೇವಿ ನಾವಿ ಇತರರಿದ್ದರು.
Published on

ಮೂಡಲಗಿ: ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ನಿಲೋಗಲ್ ಗ್ರಾಮದ ಭಾರತೀಯ ಸೇನೆಯಲ್ಲಿ ಸೇವಾನಿರತ ಯೋಧ ಅಮರೇಶ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದವರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಈಚೇಗೆ ಕರ್ನಾಟಕ ಮಾಜಿ ಸೈನಿಕರ ಸಂಘ ಮೂಡಲಗಿ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಮಾಳೇದವರ ನೇತತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಪಟ್ಟಣದ ಕಲ್ಮೇಶ್ವರ ವತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು. ಅರ್ಜುನ ಕೋಲೂರ, ಮಹಾಲಿಂಗ ಬಬಲಿ, ಭೀಮಪ್ಪ ಪಾಟೀಲ, ಸುರೇಶ ಅಂಗಡಿ, ಇಬ್ರಾಹಿಂ ನದ್ಾ, ಸಂಗೀತಾ
ಬಾಗಿಮನಿ, ಉದ್ದವ್ವ ಮುರಕುಂಬಿ, ಅನಿತಾ ಮಿರ್ಜಿ, ಮಹಾದೇವಿ ನಾವಿ, ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net