ಬಿಎಸ್ಸಿ ಅಂಗಡಿಯಲ್ಲಿ ರಾಜ್ಯೋತ್ಸವ ಆಚರಣೆ  -ಕನ್ನಡ ಬಳಸಿ ಬೆಳೆಸಲು ನೀಡಿ ಆದ್ಯತೆ - ಬಿ.ಸಿ. ವಿವೇಕ್ ಆಶಯ

dvg-bsc-nov-7-2_20231108065609835.jpg
Published on

ದಾವಣಗೆರೆ: ನಗರದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ವತಿಯಿಂದ ಬಾಪೂಜಿ ದಂತ ವೈದ್ಯಕೀಯ ಕಾಲೇಜು ರಸ್ತೆಯ ಬಿಎಸ್‌ಸಿ ಎಕ್ಸ್‌ಕ್ಲೂೃಸಿವ್ ಮಳಿಗೆ ಆವರಣದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಮಳಿಗೆ ಹೊರಾವರಣದಲ್ಲಿ ವಿಶೇಷ ಗೋಪುರ ನಿರ್ಮಿಸಲಾಗಿತ್ತು. ಅಂಗಡಿ ಒಳಭಾಗದಲ್ಲಿ ಕನ್ನಡ ಧ್ವಜದ ಬಣ್ಣಗಳ ಅಲಂಕಾರ ಮಾಡಲಾಗಿತ್ತು. ಚಲನಚಿತ್ರ ನಟರ ಭಾವಚಿತ್ರಗಳ ಜತೆಗೆ ಸಿಹಿ ವಿತರಣೆ ನಡೆಸಲಾಯಿತು.

ಕನ್ನಡ ಧ್ವಜಾರೋಹಣ ನೆರವೇರಿಸಿದ ಅಂಗಡಿಯ ಮಾಲೀಕ ಬಿ.ಸಿ. ವಿವೇಕ್ ಮಾತನಾಡಿ ರಾಜ್ಯೋತ್ಸವ, ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ಅದು ನಿತ್ಯೋತ್ಸವ ಆಗಬೇಕು. ನಮ್ಮ ದೈನಂದಿನ ವ್ಯವಹಾರ ಸೇರಿ ಎಲ್ಲರದಲ್ಲೂ ಕನ್ನಡ ಬಳಸಿ, ಬೆಳೆಸುವ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಅಂಗಡಿಯ ಮತ್ತೊಬ್ಬ ಮಾಲೀಕ ಬಿ.ಎಸ್. ಮೃನಾಲ್ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ಪ್ರಜೆಯೂ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸಬೇಕು. ಆಗ ಮಾತ್ರ ನಮ್ಮ ಭಾಷೆ, ನೆಲ-ಜಲ ಸಮೃದ್ಧವಾಗಿ ಬೆಳೆಯಲಿದೆ ಎಂದರು. ವ್ಯವಸ್ಥಾಪಕ ಉಮೇಶ್ ಹಾಗೂ ಸಿಬ್ಬಂದಿ, ಆಟೋ ಚಾಲಕರಿದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net