ಬಿಎಸ್‌ವೈ ನನ್ನ ಸೀನಿಯರ್,ಸಚಿವರ ಜಾಣ ಉತ್ತರ

IMG-20230614-WA0063-001
Published on

ಚಿತ್ರದುರ್ಗ: ಕೊಟ್ಟಿರುವ ಭರವಸೆಯಂತೆ 10 ಕೆಜಿ ಅಕ್ಕಿ ಕೊಡುವವರೆಗೂ ಬಿಡುವುದಿಲ್ಲ,ಎಲ್ಲ ಗ್ಯಾರಂಟಿಗಳ ಅನುಷ್ಠಾನಕ್ಕೆ ಒತ್ತಾಯಿಸಿ ಜುಲೈ 4ರಿಂದ ಧರಣಿ ಕೂರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಕುರಿತಂತೆ,ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ,ಬಿಎಸ್‌ವೈ ನನ್ನ ನಮ್ಮ ಸೀನಿಯರ್ ಎಂದು ಜಾಣ ಉತ್ತರ ನೀಡಿದ್ದಾರೆ.

ಯಡಿಯೂರಪ್ಪ ಅವರ ಸಂಪುಟದಲ್ಲಿದ್ದವನು ನಾನು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವನಲ್ಲ. ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೇವೆ,ಕೊಟ್ಟೇ ಕೊಡುತ್ತೇವೆ. ಬಿಜೆಪಿ ತನ್ನ ವುದೇ ಭರವಸೆಗಳನ್ನೂ ಈಡೇರಿಸಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ‌್ಯಕರ್ತರ ಸಭೆ ಕುರಿತು ಪ್ರತಿಕ್ರಿಯಿಸಿದ ಸಚಿವರು,ಅಧಿಕಾರವಿದ್ದಾಗ ಪಕ್ಷದ ಮುಖಂಡರು ಪ್ರವಾಸ ಮಾಡಲಿಲ್ಲ,ಈಗ ತಿರುಗುತ್ತಿದ್ದಾರೆಂದು ವ್ಯಂಗವಾಡಿದರು.

ಯಾರನ್ನೋ ಓಲೈಸಲು ಪಠ್ಯ ಬದಲಾಯಿಸುತ್ತಿಲ್ಲ. ಜಿಲ್ಲೆಯ ಶಾಸಕರು,ಕಾಂಗ್ರೆಸ್ ನಾಯಕರು ಜೂ.24ರಂದು ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net