ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆ ಹೆಮ್ಮೆಯ ವಿಚಾರ

27-KGL-2,,
Published on

ಕೊಳ್ಳೇಗಾಲ: ಕ್ಷೇತ್ರದ ಕಟ್ಟಕಡೆಯ ಕಾಡಂಚಿನ ಗ್ರಾಮ ಅರೇಪಾಳ್ಯಕ್ಕೆ 4ಜಿ ಸ್ಯಾಚುರೇಶನ್ ಟವರ್ ಸ್ಥಾಪನೆಗೊಂಡಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ಅರೇಪಾಳ್ಯ ಗ್ರಾಮದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್( ಬಿಎಸ್‌ಎನ್‌ಎಲ್)ವತಿಯಿಂದ ಶುಕ್ರವಾರ ಆಯೋಜಿಸಿದ್ದ 4ಜಿ ಸ್ಯಾಚುರೇಶನ್ ಟವರ್ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ 92.663 4ಜಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕೇಂದ್ರಕ್ಕೆ ಚಾಲನೆ ನೀಡಿದ್ದು, ನಮ್ಮ ಜಿಲ್ಲೆಯಲ್ಲಿ 22 ಕಡೆಗಳಲ್ಲಿ ನೆಟ್‌ವರ್ಕ್ ಸ್ಥಾಪನೆಯಾಗಿದೆ. ಅಂತೆಯೇ ಅರೇಪಾಳ್ಯದಲ್ಲೂ ನೆಟ್‌ವರ್ಕ್ ಸೌಲಭ್ಯ ದೊರೆತಿದೆ. ಇದರಿಂದ ಈ ಭಾಗದ ಹಲವು ಗ್ರಾಮಗಳ ಜನರಿಗೆ ಬಹಳ ಅನುಕೂಲವಾಗಿದೆ ಎಂದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2ಜಿ, 3ಜಿ ತಂತ್ರಜ್ಞಾನ ಅನುಷ್ಠಾನಗೊಳಿಸಿದ್ದರು. ಬಳಿಕ ಬಿಎಸ್‌ಎನ್‌ಎಲ್‌ನಲ್ಲಿ 4ಜಿ ನೆಟ್‌ವರ್ಕ್ ಬಹಳ ತಡವಾಗಿ ಬಂದಿತು. ಬಿಎಸ್‌ಎನ್‌ಎಲ್ ಸಂಸ್ಥೆಗೆ ಖಾಸಗಿ ಸಂಸ್ಥೆಗಳು ಪೈಪೋಟಿ ನೀಡುತ್ತಿದೆ. ಆದರೂ ಬಿಎಸ್‌ಎನ್‌ಎಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸೇವೆ ನೀಡುತ್ತಿದೆ ಎಂದರು.

4ಜಿ ಸ್ಯಾಚುರೇಶನ್ ಟವರ್ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಇದು ಸರಿಯಲ್ಲ. ರಾಜಕೀಯ ವೇದಿಕೆಯಲ್ಲಿ ಜನರೇ ಉತ್ತರ ನೀಡುತ್ತಾರೆ. ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಮೆಚ್ಚಿದ್ದಾರೆ. ನಮ್ಮ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ಇತರ ಪಕ್ಷಗಳು ಕಾಪಿ ಮಾಡಿದೆ ಎಂದರು.

ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಮಾತನಾಡಿ, ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತ ನೆಟ್‌ವರ್ಕ್, ರಸ್ತೆ ಹಾಗೂ ಎಲೆಕ್ಟ್ರಿಕಲ್ ಸಂಪರ್ಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಗುರಿ ಹೊಂದಿತ್ತು. ಇತ್ತೀಚೆಗೆ 120 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಹಾಡಿಗಳಿಗೆ ಪಾಲರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಚಾಲನೆ ನೀಡಿದರು. ಇನ್ನು ಜಿಲ್ಲಾದ್ಯಂತ ರಸ್ತೆ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಅರೇಪಾಳ್ಯದಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ 4ಜಿ ನೆಟ್‌ವರ್ಕ್ ಸ್ಯಾಚುರೇಶನ್ ಟವರ್ ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ದೇಶದಾದ್ಯಂತ 1 ಲಕ್ಷ ನೆಟ್‌ವರ್ಕ್ ಉದ್ಘಾಟನೆಗೊಂಡಿದೆ. ರಾಜ್ಯದಲ್ಲಿ 10 ಕಡೆಗಳಲ್ಲಿ ಚಾಲನೆ ಸಿಕ್ಕಿದೆ. ನೆಟ್ ವರ್ಕ್ ಅಳವಡಿಸಲು ಅರೇಪಾಳ್ಯದ ಕುಮಾರ್ ತಮ್ಮ ಸ್ವಂತಿಕೆಯ 5 ಸೆಂಟ್ ಜಾಗವನ್ನು ನೀಡಿ ನೆರವಾಗಿದ್ದಾರೆ. ಇದು ಬಹಳ ಖುಷಿಯ ವಿಚಾರ ಏಕೆಂದರೆ ಅರಣ್ಯ ಪ್ರದೇಶದಲ್ಲಿ ನೆಟ್‌ವರ್ಕ್ ಟವರ್ ಅಳವಡಿಸಲು ಸ್ಥಳಾವಕಾಶವಿರಲಿಲ್ಲ. ಬಹಳ ಸಮಸ್ಯೆ ಇತ್ತು. ಗ್ರಾಮಸ್ಥರೆಲ್ಲರ ಸಹಕಾರದಿಂದ ಕುಮಾರ್ ಅವರು ಜಾಗವನ್ನು ನೀಡಿದ್ದಾರೆ. ಬಿಎಸ್‌ಎನ್‌ಎಲ್ ಅಧಿಕಾರಿಗಳು ಅವರಿಗೆ ನೆರವಾಗಬೇಕು. 5 ಕಿಮೀ ವ್ಯಾಪ್ತಿಗೆ 4ಜಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ದೊರೆಯಲಿದೆ. ಇದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.

ಚಾಮರಾಜನಗರ ಡಿವೈಎಸ್ಪಿ ಸ್ನೇಹರಾಜು, ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್ ರಾಜೇಂದ್ರಕುಮಾರ್ ಸಿಂಗ್, ಡಿಓಟಿ ಡೈರೆಕ್ಟರ್ ಬ್ರಹ್ಮಯ್ಯ, ತಿಮ್ಮರಾಜೀಪುರ ಗ್ರಾ.ಪಂ ಸದಸ್ಯ ಲಕ್ಷ್ಮಮ್ಮ, ನಾಗರಾಜು, ತಾಲೂಕು ಗ್ಯಾರೇಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net