

ಹುಮನಾಬಾದ್: ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಯೋಜನೆಗಳ ಮೂಲಕ ಉತ್ತಮ ಆಡಳಿತ ನೀಡಿರುವುದು ಮಾದರಿಯಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಗುರುವಾರ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸುವ ಮೂಲಕ ಯಡಿಯೂರಪ್ಪನವರ ಜನ್ಮದಿನ ಆಚರಿಸಿದ ಅವರು, ಬಿಎಸ್‌ವೈ ಅವರಿಗೆ ಭಗವಂತ ಉತ್ತಮ ಆರೋಗ್ಯ ಕರುಣಿಸಲಿ ಎಂದು ಶುಭ ಹಾರೈಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲವಧಿವಾದಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದ ಫಲಾನುಭವಿ ಹಾಗೂ ಅನ್ನದಾತ ರೈತ ಮುಖಂಡರನ್ನು ಸನ್ಮಾನಿಸಿದರು.
ಮುಖಂಡರಾದ ವಿಶ್ವನಾಥ ಪಾಟೀಲ್ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್ ಬೆಳಕೇರಾ, ಸಂತೋಷ ಪಾಟೀಲ್, ವೈಜಿನಾಥ ಪಾಟೀಲ್ , ನಾಗಭೂಷಣ ಸಂಗಮ, ಮಲ್ಲಿಕಾರ್ಜುನ ಸಿಗಿ, ಗೋಪಾಲಕೃಷ್ಣ ಮೋಹಾಳೆ, ರವಿ ಹೊಸಳ್ಳಿ, ಸತೀಶ ರಂಜೇರಿ, ಶಿವರಾಜ ರಾಜೋಳ ಇತರರಿದ್ದರು.