ಬಿಎಲ್‌ಒ ಜವಾಬ್ದಾರಿ ಕೈಬಿಡಲು ಆಗ್ರಹ

Demand for BLO to abdicate responsibility
ಮುದ್ದೇಬಿಹಾಳ ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂಗನವಾಡಿ ನೌಕರರ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಮಾತನಾಡಿದರು. ಶ್ರೀದೇವಿ ಸರ್ಜಾಪುರ, ಶೋಭಾ ಘಾಟಗೆ, ಗೌರಮ್ಮ ಕರ್ಜಗಿ ಇತರರಿದ್ದರು
Published on

ಮುದ್ದೇಬಿಹಾಳ: ಈಗಾಗಲೇ ಹಲವು ಜವಾಬ್ದಾರಿಗಳನ್ನು ಹೊತ್ತುಕೊಂಡು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಬಿಎಲ್‌ಒ ಜವಾಬ್ದಾರಿ ವಹಿಸಬಾರದು ಎಂದು ಅಂಗನವಾಡಿ ನೌಕರರ ಸಂಘಟನೆ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಹೇಳಿದರು.

ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಅಂಗನವಾಡಿ ನೌಕರರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಅಂಗನವಾಡಿ ನೌಕರರು ಮಾತೃವಂದನಾ, ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ವಿತರಣೆ, ಗರ್ಭಿಣಿ, ಬಾಣಂತಿಯರಿಗೆ ಸೌಲಭ್ಯಗಳ ತಲುಪಿಸುವಿಕೆ, ಮೊಟ್ಟೆ ವಿತರಣೆ, ಆನ್‌ಲೈನ್‌ದಲ್ಲಿ ಸರ್ವೆ ಕಾರ್ಯ ಸೇರಿ ಹತ್ತಾರು ಕೆಲಸಗಳ ಕಾರ್ಯಾಭಾರವಿದೆ. ಈ ಮಧ್ಯೆ ಬಿಎಲ್‌ಒ ಜವಾಬ್ದಾರಿ ನಿರ್ವಹಿಸುವುದು ಆಗುವುದಿಲ್ಲ ಎಂದರು.

ಈ ಕುರಿತು ಇತ್ತೀಚೆಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಆ. 4ರಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರಿಗೆ ಲಿಖಿತ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿದ್ದ ಕಾರ್ಯಕರ್ತೆಯರು ನಮಗೆ ಬಿಎಲ್‌ಒ ಜವಾಬ್ದಾರಿ ವಹಿಸುವುದಕ್ಕೆ ವಿರೋಧವಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಶ್ರೀದೇವಿ ಸರ್ಜಾಪುರ, ಶೋಭಾ ಘಾಟಗೆ, ಗೌರಮ್ಮ ಕರ್ಜಗಿ ಇತರರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net