ಬಿಇಒ ಶಿವಗುಂಡಪ್ಪ ಅಮಾನತು

Published on

ಹುಮನಾಬಾದ್: ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಸಿದ್ದಣಗೋಳ ಅವರನ್ನು ಶನಿವಾರ ಸೇವೆಯಿಂದ ಅಮಾನತು ಮಾಡಲಾಗಿದೆ. ಕಚೇರಿಯಲ್ಲಿನ ಕಡತಗಳನ್ನು ನಿರ್ವಹಣೆ ಮಾಡದೆ ನಿಯಮಬಾಹಿರವಾಗಿ ಆಡಳಿತ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಗರೀಮಾ ಪನ್ವಾರ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಭಾರಿ ಬಿಇಒ ಆಗಿ ಕಮಲಾಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕಿ ಕಮಲಾ ಕುಲಕಣರ್ಿ ಅವರನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net