ಬಿಇಒ-ಇತರ ಅಧಿಕಾರಿಗಳ ಭೇಟಿ

21 KAMPLI 02
Published on

ಕಂಪ್ಲಿ: ತಾಲೂಕಿನ ಆರು ಕೇಂದ್ರಗಳಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದ ಪ್ರಥಮ ಭಾಷೆ ಹಾಗೂ ಆಂಗ್ಲ ಮಾಧ್ಯಮದ ದ್ವಿತೀಯ ಭಾಷೆ ಪರೀಕ್ಷೆ ನಡೆದವು. 1951 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, 1925 ವಿದ್ಯಾರ್ಥಿಗಳು ಹಾಜರಾಗಿದ್ದರು.

ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಕೇಂದ್ರದಲ್ಲಿ ಐವರು, ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ ಇಬ್ಬರು ಅಂಗವಿಕಲರು, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಒಬ್ಬ ಅಂದ ವಿದ್ಯಾರ್ಥಿ ಸಹಾಯಕರ ನೆರವಿನೊಂದಿಗೆ ಪರೀಕ್ಷೆ ಬರೆದರು. ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

ಸುಗ್ಗೇನಹಳ್ಳಿ ವಿದ್ಯಾಭಾರತಿ ಶಾಲೆಯ ಕೇಂದ್ರಕ್ಕೆ ಕುರುಗೋಡು ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮನೋಹರ, ಶಿಕ್ಷಣ ಸಂಯೋಜಕ ಭುಜಂಗಯ್ಯ, ಇಸಿಒ ಟಿ.ಎಂ.ಬಸವರಾಜ, ಎಂ.ರೇವಣ್ಣ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net