

ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ನಾಶಗೊಂಡಿದೆ.
ಬಿಆರ್‌ಟಿ ವ್ಯಾಪ್ತಿಯ ಶೆಟ್ರುಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕೆಲಸವನ್ನು ಮಾಡುತ್ತಿದ್ದು, ಸಂಜೆವರೆಗೂ ತಹಬದಿಗೆ ಬಂದಿಲ್ಲ. ನೂರಾರು ಎಕರೆ ಅರಣ್ಯ ನಾಶವಾಗಿರುವ ಶಂಕೆಯಿದೆ.
ಗಾಳಿ ವೇಗ ಹೆಚ್ಚಾಗಿದ್ದು, ಬೆಂಕಿ ನಂದಿಸಲು ತೊಡಕಾಗಿದೆ. ರಾತ್ರಿ ತನಕ ತಹಬದಿಗೆ ಬರಬಹುದು ಎಂದು ಆರ್‌ಎಫ್‌ಒ ಲೊಕೇಶ್‌ಮೂರ್ತಿ ಮಾಹಿತಿ ನೀಡಿದರು.