ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಆನೆ ಗಣತಿ

18 yelandur 06
Published on

ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಸಮೀಕ್ಷೆ ನಡೆಯುತ್ತಿದ್ದು, ಎರಡನೇ ದಿನವು ಕಾರ್ಯವು ಸಾಗಿದೆ.


ಆನೆ ಗಣತಿ ಕಾರ್ಯದ ಮೊದಲ ದಿನವಾದ ಬುಧವಾರ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯ ಪ್ರದೇಶದ ಗೇಮ್ ರೋಡ್ ಗಳಲ್ಲಿ ಹೋಗಿ ಆನೆಗಳನ್ನು ನೇರವಾಗಿ ವೀಕ್ಷಣೆ ಮಾಡಿ, ಅವುಗಳ ಸಂಖ್ಯೆ ಮತ್ತು ವಿವರಗಳನ್ನು ದಾಖಲು ಮಾಡಿಕೊಂಡಿದ್ದಾರೆ.

ಎರಡನೇ ದಿನವಾದ ಗುರುವಾರ ಪ್ರತಿ ಗಸ್ತಿನಲ್ಲಿ ಎರಡು ಕಿ.ಮೀ. ಉದ್ದದ ಲೈನ್ ಟ್ರ್ಯಾಜೆಕ್ಟರ್ ನಿರ್ಮಿಸಿ ಅದರ ಎರಡೂ ಬದಿಗಳಲ್ಲಿ ಕಂಡು ಬಂದ ಆನೆಯ ಲದ್ದಿಯ ಆಧಾರದಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net