ಬಿ.ಸಿ.ಪಾಟೀಲ್ ಅಜ್ಞಾನಿ ಹೇಳಿಕೆಗೆ ಖಂಡನೆ, ರೈತಸಂಘ, ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ

12 SDLP 01
Published on

ಶಿಡ್ಲಘಟ್ಟ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಜ್ಞಾನಿ ಎಂದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶನಿವಾರ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಬಿ.ಸಿ.ಪಾಟೀಲ್ ಹಾವೇರಿಗೆ, ಹಿರೇಕೆರೂರಿಗೆ ಸಚಿವರಲ್ಲ, ಭೂಮಿಗೆ ಅಗತ್ಯವಾದ ಯೂರಿಯಾ ಸಿಗುತ್ತಿಲ್ಲ. ನೀವು ಸಿನಿಮಾ ನಟನಂತೆ ನಟನೆ ಮಾಡದೇ ರೈತರಿಗೆ ಅತ್ಯಗತ್ಯವಾದ ಬೀಜ ಮತ್ತು ಗೊಬ್ಬರ ಕೊಡಿ ಎಂದು ಹಾಗೂ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯ್ಕೆಗಾಗಿ ರೈತರ ಮಕ್ಕಳಿಗಾಗಿ ಆಯೋಜಿಸಬೇಕಿದ್ದ ಪರೀಕ್ಷೆ ರದ್ದು ಮಾಡಿದ್ದನ್ನು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದರು. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಅವರನ್ನು ಅಜ್ಞಾನಿ ಎಂದಿರುವುದು ಖಂಡನೀಯ ಎಂದು ರೈತ ಸಂಘ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕಾಯ್ದೆಗಳನ್ನು ವಿರೋಧಿಸಿ ಸೆ.21 ರಂದು ರೈತಸಂಘ, ಹಸಿರುಸೇನೆ ವಿಧಾನಸೌಧ ಮುತ್ತಿಗೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ತಾಲೂಕು ರೈತ ಸಂಘದ ತಾಲೂಕು ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಪದಾಧಿಕಾರಿಗಳಾದ ವೇಣು, ಬೀರಪ್ಪ, ಕಿಶೋರ್, ರಮೇಶ್, ವೈ.ರಾಮಕೃಷ್ಣಪ್ಪ, ಅಂಬರೀಶ್, ನಾಗರಾಜ್, ನಾರಾಯಣಸ್ವಾಮಿ, ಗಂಗಾಧರ್, ಅಶ್ವತ್ಥನಾರಾಯಣ್, ಏಜಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net