ಬಿ.ಸಿ. ಟ್ರಸ್ಟ್ ನೂತನ ಕಚೇರಿ ಉದ್ಘಾಟನೆ

web5
ರಾಮದುರ್ಗದ ಧರ್ಮಸ್ಥಳ ಗ್ರಾಮಾಭಿವದ್ಧಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಐ.ಆರ್.ಪಟ್ಟಣಶೆಟ್ಟಿ, ವಸಂತ ಸಾಲಿಯಾನ ಇತರರು ಇದ್ದರು.
Published on

ರಾಮದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಬಿಸಿ ಟ್ರಸ್ಟ್ ಕಚೇರಿ ಸ್ಥಳಾಂತರಗೊಂಡ ಪ್ರಯುಕ್ತ ಸೋಮವಾರ ನೂತನ ಕಚೇರಿಯಲ್ಲಿ ಮಹಾಲಕ್ಷ್ಮೀ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದೊಂದಿಗೆ ನೂತನ ಕಚೇರಿಯ ಉದ್ಘಾಟನಾ ಸಮಾರಂಭ ಜರುಗಿತು.

ಹರ್ಲಾಪುರ ಡವಳೇಶ್ವರ ಮಠದ ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು, ವತ್ತಿಪರ ಶಿಕ್ಷಣ ಮಾಡುತ್ತಿರುವ 53 ಜನ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಯೋಜನೆಯಲ್ಲಿ ಮಂಜೂರು ಮಾಡಿದ ಶಿಷ್ಯ ವೇತನ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಬಳಿಗಾರ ಅವರು ಸಾಂಕೇತಿಕವಾಗಿ ಹಸ್ತಾಂತರ ಮಾಡಿದರು. 27 ಅಂಗವಿಕಲರಿಗೆ ವೀಲ್‌ಚೇರ್ ಸೇರಿದಂತೆ ಹಲವು ಸಲಕರಣೆಗಳನ್ನು ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಅವರು ಲಾನುಭವಿಗಳಿಗೆ ಹಸ್ತಾಂತರಿಸಿದರು.

ಧಾರವಾಡ ಪ್ರಾದೇಶಿಕ ಕಚೇರಿಯ ನಿರ್ದೇಶಕ ವಸಂತ ಸಾಲಿಯಾನ, ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ್, ಬಿ.ಎ. ಬಸಿಡೋಣಿ, ಅಶೋಕ ಕುಲಗೋಡ, ರಮೇಶ ಜಲಗೇರಿ, ಜಿ.ಬಿ. ರಂಗನಗೌಡ್ರ, ಯಮನಪ್ಪ ಕಕ್ಕರೆಡ್ಡಿ, ಬಸಪ್ಪ ಹುಚಕೆಂಚನ್ನವರ, ಯೋಜನಾಧಿಕಾರಿ ಸಚಿನ, ಮೇಲ್ವಿಚಾರಕರಾದ ಗಣೇಶ, ಸಂತೋಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net