ಬಿ.ಬೆಟ್ಟ ಗ್ರಾ.ಪಂ.ಗೆ ದೀನಬಂಧು ಗರಿ

26 yelandur 01
Published on

ಯಳಂದೂರು: ಪ್ರಸುತ್ತ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸಿದ ಕೀರ್ತಿಗೆ ಪಾತ್ರವಾಗಿರುವ ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಗೆ ಪಂಚಾಯತ್ ರಾಜ್ ಇಲಾಖೆಯಿಂದ ನೀಡುವ ದೀನ ಬಂಧು ಪಂಚಾಯತ್ ಪ್ರಶಸ್ತಿ ಒಲಿದಿದೆ.


ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಬೆಟ್ಟ ಗ್ರಾಮ ಸೇರಿ ಬಂಗ್ಗೆಪೋಡು, ಯರಕನಗದ್ದೆ, ಪುರಾಣಿಪೋಡು, ಹೊಸಪೋಡು, ಕಲ್ಯಾಣಿ ಪೋಡು, ಮಂಜಿಗುಂಡಿ ಪೋಡು, ಸೀಗೆಬೆಟ್ಟ, ಮುತ್ತಗನಗದ್ದೆ ಪೋಡು ಎಂಬ 8 ಪೋಡುಗಳಿವೆ. ಬಿಳಿಗಿರಿರಂಗನಬೆಟ್ಟ ಗ್ರಾ.ಪಂ. ಅಂದಾಜು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯ ಅತ್ಯಂತ ಚಿಕ್ಕ ಗ್ರಾಮ ಪಂಚಾಯಿತಿಯಾಗಿದೆ.

2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇಲ್ಲಿನ ಪೋಡುಗಳಲ್ಲಿ ಸೋಲಿಗ ಕುಟುಂಬಗಳಿಗೆ ಸಮರ್ಪಕ ಕೂಲಿ, ಜತೆಗೆ ಅವರು ಬೆಳೆದ ಬೆಳೆಗಳಿಗೂ ನೆರವು ನೀಡಿ, ಆರ್ಥಿಕಾಭಿವೃದ್ಧಿಗೆ ಗ್ರಾ.ಪಂ. ಪ್ರೋತ್ಸಾಹ ನೀಡಿದೆ.


ಈ ಬಾರಿಯ ದೀನ ಬಂಧು ಪಂಚಾಯತ್ ಪ್ರಶಸ್ತಿ ರಾಜ್ಯದ ಮೂರು ಗ್ರಾಮ ಪಂಚಾಯಿತಿಗಳಾದ ದಾವಣಗೆರೆ ಜಿಲ್ಲೆಯ ಶ್ರೀರಾಮನಗರ, ಮೈಸೂರು ಜಿಲ್ಲೆಯ ಉದ್ಬೂರು ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಲಭಿಸಿದ್ದು, ಇದು ಗ್ರಾಮ ಪಂಚಾಯಿತಿಗಳ ಅತ್ಯುತ್ತಮ ಸಾಧನೆಗೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net