ಬಿ.ನಾಗೇಂದ್ರ ಅಪ್ತರ ಮನೆ ಮೇಲೆ ಇಡಿ ದಾಳಿ

Published on

ಬಳ್ಳಾರಿ : ಮಾಜಿ‌ ಸಚಿವ ಬಿ.ನಾಗೇಂದ್ರ ಅವರ ಸಂಬಂಧಿ ಹಾಗೂ ಅಪ್ತ ಸಹಾಯಕರ ಮನೆ ಮೇಲೆ ಜಾರಿ‌ ನಿರ್ದೇಶನಾಲಯ ( ಇಡಿ )ಬುಧವಾರ ದಾಳಿ‌ ನಡೆಸಿ ಅಗತ್ಯವಾದ ದಾಖಲೆಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ಮೂವರು ಇಡಿ‌ ಅಧಿಕಾರಿಗಳು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಯು ಇಲ್ಲಿನ ಐಶ್ವರ್ಯ ಕಾಲನಿ ನಿವಾಸಿ ಟಿ.ಎರ್ರಿಸ್ವಾಮಿ, ಕಪ್ಪಗಲ್ ರಸ್ತೆಯ ವಿಜಯಕುಮಾರ್ ಸೇರಿದಂತೆ ‌ನಗರದ ನಾಲ್ಕು ಕಡೆ ದಾಳಿ ನಡೆಸಿ ದಾಖಲೆಗಳನ್ನು ‌ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ‌ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು, ಅಧಿಕಾರಿಗಳು ಚುರುಕಾಗಿ ದಾಳಿ ನಡೆಸಿದ್ದಾರೆ. ಇಲ್ಲಿನ ಸ್ಥಳೀಯ ‌ಪೊಲೀಸ್ ರಿಗೂ ಯಾವುದೇ ಮಾಹಿತಿ ನೀಡದೆ ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net