ಬಿ.ಚಂದನ್ ಕುಮಾರ್‌ಗೆ 525 ಅಂಕ

chandankumar-b (1)
ಚಂದನ್ ಕುಮಾರ್
Published on

ಕೆ.ಆರ್.ಸಾಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿ ಬಿ.ಚಂದನ್ ಕುಮಾರ್ 525 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ವಿಜ್ಞಾನ ವಿಭಾಗದಲ್ಲಿ ಯು.ಅಂಬಿಕಾ (465), ಕಲಾ ವಿಭಾಗದಲ್ಲಿ ಹರ್ಷಿತಾ 473 ಅಂಕ ಪಡೆದು ಆಯಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಮೂರು ವಿಭಾಗದಲ್ಲಿ ಒಟ್ಟು 65 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.57% ಫಲಿತಾಂಶ ದೊರೆತಿದೆ ಎಂದು ಪ್ರಭಾರ ಪ್ರಾಂಶುಪಾಲ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net