ಬಾವೂರ ಗ್ರಾಪಂ ಶಾರದಾಗೆ ಒಲಿದ ಅದೃಷ್ಟ

Good luck to Bavoora Gramam Sharda
ತಾಳಿಕೋಟೆ ತಾಲೂಕು ಬಾವೂರ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾರದಾ ಹಡಪದ ಹಾಗೂ ಮಲ್ಲನಗೌಡ ಬಿರಾದಾರ ಬೆಂಬಲಿಗರು ಹಾಗೂ ಸದಸ್ಯರೊಂದಿಗೆ ವಿಜಯೋತ್ಸವ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ), ಸಿದ್ದನಗೌಡ ಪಾಟೀಲ, ರೇಣುಕಾ ಬಡಿಗೇರ ಇತರರಿದ್ದರು.
Published on

ತಾಳಿಕೋಟೆ: ತಾಲೂಕಿನ ಬಾವೂರ ಗ್ರಾಮದ ಗ್ರಾಪಂ ನೂತನ ಅಧ್ಯಕ್ಷರಾಗಿ ಶಾರದಾ ಹಡಪದ, ಉಪಾಧ್ಯಕ್ಷರಾಗಿ ಮಲ್ಲನಗೌಡ ಬಿರಾದಾರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಶಾರದಾ ಹಡಪದ ಹಾಗೂ ಶಿವಬಾಯಿ ಮೇಟಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರು ತಲಾ 8 ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಚುನಾವಣಾಧಿಕಾರಿಗಳು ಚೀಟಿ ಎತ್ತುವ ಪ್ರಕ್ರಿಯೆ ನಡೆಸಿದಾಗ ಶಾರದಾ ಹಡಪದ ಅವರು ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಬಿರಾದಾರ ಮತ್ತು ಶಿವಣ್ಣ ಕಾಮರಡ್ಡಿ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಮಲ್ಲನಗೌಡ ಬಿರಾದಾರ ಅವರಿಗೆ 8, ಶಿವಣ್ಣ ಕಾಮರಡ್ಡಿ ಅವರಿಗೆ 7 ಮತಗಳು ಬಂದವು. ಒಂದು ಮತ ತಿರಸ್ಕೃತಗೊಂಡಿತ್ತು. ಹೀಗಾಗಿ ಮಲ್ಲನಗೌಡ ಬಿರಾದಾರ ಆಯ್ಕೆಯನ್ನು ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ತಾಪಂ ಇಒ ಬಸವಂತರಾಯಗೌಡ ಬಿರಾದಾರ, ಸಹಾಯಕರಾಗಿ ಪಿಡಿಒ ರಾಜಶ್ರೀ ದೇವೂರ ಕಾರ್ಯನಿರ್ವಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ) ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು, ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಸದಸ್ಯರಾದ ಸಿದ್ದನಗೌಡ ಪಾಟೀಲ, ರೇಣುಕಾ ಬಡಿಗೇರ, ಬೊಮ್ಮಲಿಂಗಪ್ಪ ಖೈರೋಡಗಿ, ಚನ್ನಮ್ಮ ಹಿರೇಮಠ, ಮರಲಿಂಗವ್ವ ಮೇಟಿ, ದೇವಮ್ಮ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net