ಬಾವಿಯಲ್ಲಿ ಬಿದ್ದಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

1651232702134
Published on

ವಿಜಯಪುರ: ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದಿದ್ದ ರಾಷ್ಟ್ರಪಕ್ಷ ನವಿಲೊಂದು ಮೇಲೆ ಬರಲಾಗದೆ ಕಳೆದ ಮೂರು ದಿನಗಳಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿತ್ತು. ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಸುಭಾಸ್ ಬನಸೋಡೆ ಎಂಬ ರೈತನ ಹೊಲದಲ್ಲಿದ್ದ 40 ಅಡಿ ಆಳದ ಬಾವಿಯಲ್ಲಿ ನವಿಲು ಬಿದ್ದಿತ್ತು. ಕೆಳಗೆ ಇಳಿಯಲು ಬಾರದಂತಹ ಬಾವಿಯಾಗಿದ್ದರಿಂದ ರಾಷ್ಟ್ರೀಯ ಪಕ್ಷಿ ನವಿಲು ಬಿದ್ದು 3 ದಿನಗಳಾದ್ರೂ ಅದಕ್ಕೆ ಮೇಲೆ ಬರಲಾಗಿರಲಿಲ್ಲ ಹಾಗೂ ಯಾರೂ ಹೊರ ತೆಗೆಯುವ ಸಾಹಸ ಮಾಡಿರಲಿಲ್ಲ. ಕೊನೆಗೆ ಸ್ಥಳೀಯರು ಸಿಂದಗಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಕಟ್ಟಿ, ಅದರ ಸಹಾಯದಿಂದ ಆಳವಾದ ಬಾವಿಗೆ ಇಳಿದು, ಬಾವಿಯಿಂದ ಸುರಕ್ಷಿತವಾಗಿ ನವಿಲನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ನಿಶಕ್ತವಾಗಿದ್ದ ನವಿಲಿಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಹಗ್ಗದ ಸಹಾಯದಿಂದ ಅಗ್ನಿ ಶಾಮಕ ಸಿಬ್ಬಂದಿಯಾದ ಶಾಂತಪ್ಪ ಬಿರಾದಾರ ಹಾಗೂ ಸಹ ಸಿಬ್ಬಂದಿಗಳಾದ, ಸುರೇಶ ವೇದಪಾಠಕ್, ಸಿದರಾಯ ಪಾರ್ಥನಳ್ಳಿ, ಕಲ್ಯಾಣಕುಮಾರ ಭಜಂತ್ರಿ ಹಾಗೂ ಶರಣಬಸು ಬಾಗೇವಾಡಿ ಅವರ ತಂಡ ನವಿಲನ್ನು ರಕ್ಷಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net