

ಹುಲಸೂರು: ಸೋಲದಾಬಕಾ ಗ್ರಾಮದ ಜಮೀನೊಂದರ ತೆರೆದ ಬಾವಿಯಲ್ಲಿ ಬಿದ್ದು ಮಹಾರಾಷ್ಟçದ ಅಂಬಲಗಾ ತಾಂಡಾದ ವಿಲಾಸ ರಾಠೋಡ್ (೪೦) ಮೃತ ಪಟ್ಟಿದ್ದಾರೆ. ಭಾನುವಾರ ಕುಡಿಯುವ ನೀರು ತರಲು ಹೋಗಿದ್ದ ವೇಳೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಕೆಲ ವರ್ಷದಿಂದ ಸೋಲದಾಬಕಾ ಗ್ರಾಮದ ಅಣ್ಣಾರಾವ ಜಾಧವ್ ಅವರ ಜಮೀನನ್ನು ಲೀಸ್‌ಗೆ ಪಡೆದು ಕೃಷಿ ಮಾಡುತ್ತಿದ್ದರು. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ನಾಗೇಂದ್ರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.