ಬಾವಿಗೆ ಬಿದ್ದು ಮಗು ಸಾವು

11 gkp 02 siyan
ಮೃತ ಸಿಯಾನ್‌
Published on

ಗೋಣಿಕೊಪ್ಪ: ಕೋಟೂರು ಗ್ರಾಮದ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವಿಗೀಡಾಗಿದೆ. ಪೆಮ್ಮಂಡ ರೋಶನ್, ಇಸು ದಂಪತಿ ಪುತ್ರಿ ಸಿಯಾನ್ (3) ಮೃತ ಕಂದಮ್ಮ. ಬುಧವಾರ ಸಂಜೆ ಬಲೂನ್‌ನಲ್ಲಿ ಆಟವಾಡುತ್ತಿದ್ದಾಗ ಮನೆಯ ಸಮೀಪವಿದ್ದ ಬಾವಿಗೆ ಬಲೂನ್ ಬಿದ್ದಿದೆ. ಇದನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಮಗು ಬಾವಿಗೆ ಜಾರಿ ಬಿದ್ದಿದೆ. ಮನೆಯ ಒಳಗೆ ಇದ್ದ ಪಾಲಕರು ಮಗುವನ್ನು ಹುಡುಕಿಕೊಂಡು ಬಂದಾಗ ಬಾವಿಯಲ್ಲಿ ಪತ್ತೆಯಾಯಿತು. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಕರುಳು ಹಿಂಡುವಂತಿತ್ತು. ಬೀರ್ಯ ಕೊಡವ ಸಿನಿಮಾದಲ್ಲಿ ಸಿಯಾನ್ ಪಾತ್ರ ಮಾಡಿತ್ತು ಎಂದು ತಿಳಿದುಬಂದಿದೆ. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net