ಹನೂರು: ಸಮೀಪದ ಆರ್.ಎಸ್.ದೊಡ್ಡಿಯ ಬಡಾವಣೆಯೊಂದರಲ್ಲಿ ಮಂಗಳವಾರ ಆಯತಪ್ಪಿ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತುವ ಮೂಲಕ ರಕ್ಷಿಸಿದ್ದಾರೆ.
ಗ್ರಾಮದ ಹೊರವಲಯದ ಮುದ್ದಪ್ಪ ಬಡಾವಣೆಯ ಮಾಳದಲ್ಲಿ ನಂಜುಂಡಸ್ವಾಮಿ ಅವರು ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಹಸು ಆಯತಪ್ಪಿ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ನಂಜುಂಡಸ್ವಾಮಿ ಅವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಆನಂದ್‌ಕುಮಾರ್, ಅಶೋಕ್, ಬಸವರಾಜು, ಮನೋಹರ್, ಹರ್ಷ ಹಾಗೂ ಲೋಕೇಶ್ ಭಾಗವಹಿಸಿದ್ದರು.