

ಬೀದರ್: ಮರಕಲ್ ಗ್ರಾಮದ ತೆರೆದ ಬಾವಿಗೆ ಬಿದ್ದ ಜಿಂಕೆಯನ್ನು ಸ್ಥಳೀಯ ಯುವಕರು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಊರ ಹೊರವಲಯದ ಸಾಯಿಬಾಬಾ ಮಂದಿರ ಸಮೀಪದ ತೆರೆದ ಬಾವಿಯಿಂದ ಶಬ್ದ ಕೇಳಿ ಬಂದಿದ್ದರಿಂದ ಹೊಲದ ಮಾಲೀಕ ಸಂಜು ಪಾಟೀಲ್ ಹೋಗಿ ನೋಡಿದಾಗ ಜಿಂಕೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡು ತಕ್ಷಣ ಮಾಹಿತಿ ನೀಡುತ್ತಲೇ ಯುವಕರಾದ ಅನೀಲ ಪಾಟೀಲ್, ವಿಶ್ವನಾಥ ಜೀರ್ಗೆ ಬಾವಿಗಿಳಿದು ಜಿಂಕೆಯನ್ನು ಬಚಾವ್ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಲೋಕೇಶ ಬಿರಾದಾರ್, ಚಂದು ಮರಾಠ, ಸಂಜು ಪಾಟೀಲ್, ಸಿದ್ದು ಇತರರು ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದರು.