ಬಾವಿಗೆ ಬಿದ್ದ ಜಿಂಕೆ ರಕ್ಷಣೆ

14-GPT-3-JINKE
ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ನೀರಿಲ್ಲದ ಬಾವಿಗೆ ಬಿದಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ಮೇಲೆತ್ತಿ ಚಿಕಿತ್ಸೆ ನೀಡಿದರು.
Published on

ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.

ಬುಧವಾರ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನೀರಿಲ್ಲದ ಬಾವಿಗೆ ಗಂಡು ಜಿಂಕೆ ಬಿದ್ದಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬಲೆ ಹಾಕಿ 20 ಅಡಿ ಆಳದ ಬಾವಿಯಿಂದ ಜಿಂಕೆಯನ್ನು ಮೇಲೆತ್ತಿದರು. ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಜಿಂಕೆಯ ಗಾಯಕ್ಕೆ ಚಿಕಿತ್ಸೆ ನೀಡಿದ ನಂತರ ಅರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ, ಆರ್‌ಎಫ್‌ಒ ಡಾ.ಲೋಕೇಶ್, ಡಿಆರ್‌ಎಫ್‌ಒ ಮುದ್ದುರಾಜ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net