

ಬಾಳೆಹೊನ್ನೂರು: ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಶುಕ್ರವಾರ ಕರೆ ನೀಡಿದ್ದ ಬಾಳೆಹೊನ್ನೂರು ಬಂದ್ಗೆ ಭಾರಿ ಬೆಂಬಲ ವ್ಯಕ್ತವಾಯಿತು. ಖಾಂಡ್ಯ ಹೋಬಳಿ, ಕಡಬಗೆರೆ, ಸಂಗಮೇಶ್ವರಪೇಟೆಯಲ್ಲಿ ಅಂಗಡಿ ಮುಂಗಟ್ಟು, ಬ್ಯಾಂಕ್ಗಳನ್ನು ಬಂದ್ ಮಾಡಲಾಗಿತ್ತು. ಶಾಲಾ ಕಾಲೇಜುಗಳು ನಡೆದವು. ಬಸ್ ಸಂಚಾರ ಎಂದಿನಂತಿತ್ತು. ಜೇಸಿ ವೃತ್ತದಲ್ಲಿ ನಡೆದ ಪ್ರತಿಭನಟನಾ ಸಭೆಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ್ ಶಶಾಂಕ್ ಹೇರೂರು ಮಾತನಾಡಿ, ಹಿಂದುಗಳ ಬಳಿ ಯಾವುದೇ ಆಯುಧ, ಅಸ್ತ್ರಗಳು ಇಲ್ಲವಾಗಿದೆ. ಜಿಹಾದಿಗಳು ಮನೆ ಮನೆಯಲ್ಲೂ ತಲವಾರುಗಳನ್ನು ಇಟ್ಟುಕೊಂಡಿದ್ದಾರೆ. ಹಿಂದುಗಳ ಒಗಟ್ಟಿನ ಕೊರತೆಯಿಂದ ವಿವಿಧೆಡೆ ಹಿಂದು ಕಾರ್ಯಕರ್ತರ ಹತ್ಯೆಯಾಗುತ್ತಿದೆ ಎಂದು ದೂರಿದರು. ಪ್ರವೀಣ್, ಕನ್ಹಯ್ಯಲಾಲ್, ಹರ್ಷ ಸೇರಿದಂತೆ 28 ಹಿಂದು ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆದಿದೆ. ರಾಜ್ಯದ ಗೃಹ ಮಂತ್ರಿಗಳ ಬಗ್ಗೆ ಕಾರ್ಯಕರ್ತರಿಗೆ ಯಾವುದೇ ನಂಬಿಕೆ ಉಳಿದಿಲ್ಲ. ಹರ್ಷನ ಹತ್ಯೆಯಾದಾಗ ಆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಪ್ರಮುಖರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ರತ್ನಾಕರ್ ಗಡಿಗೇಶ್ವರ, ಮಹೇಶ್ಚಂದ್ರ, ಜಗದೀಶ್ಚಂದ್ರ, ಹೊಳೆಬಾಗಿಲು ಮಂಜು, ವೆಂಕಟೇಶ್ ಭಟ್, ಸುಧಾ ಪೈ, ಶಮೇಶ್, ಪ್ರತಾಪ್ ಹೇರೂರು, ಸುಜಿತ್ ಬನ್ನೂರು, ವಿಲಾಸ್ ಕುಡ್ವ, ರಮೇಶ್ ಗಡಿಗೇಶ್ವರ, ಮಂಜು ಹಲಸೂರು ಮತ್ತಿತರರು ಇದ್ದರು.