ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆ

bhr rain
ಬಾಳೆಹೊನ್ನೂರು ಸಮೀಪದ ಹಲಸೂರು ಕಬ್ಬಿನಮಣ್ಣು ಬಳಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ.

ಮಧ್ಯಾಹ್ನ ಒಂದು ಗಂಟೆ ವೇಳೆಗೆ ಗುಡುಗಿನ ಆರ್ಭಟದೊಂದಿಗೆ ಆರಂಭಗೊಂಡ ಧಾರಾಕಾರ ಮಳೆ ಮೂರು ಗಂಟೆಗೂ ಅಧಿಕ ಕಾಲ ಒಂದೇ ಸಮನೆ ಸುರಿಯಿತು.

ಮೂರ್ನಾಲ್ಕು ದಿನಗಳಿಂದ ಸಂಜೆ ಹಾಗೂ ರಾತ್ರಿ ವೇಳೆ ಸುರಿಯುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನವೇ ಆರಂಭಗೊಂಡಿತು. ಮಳೆಗೆ ಪಟ್ಟಣದ ಮುಖ್ಯರಸ್ತೆಗಳೆಲ್ಲ ಹಳ್ಳದಂತೆ ಮಾರ್ಪಾಡಾಗಿ ವಾಹನ ಚಾಲಕರು ಪರದಾಡುವಂತಾಯಿತು. ಬಾಳೆಹೊನ್ನೂರು, ರಂಭಾಪುರಿ ಪೀಠ, ಮೆಣಸುಕೊಡಿಗೆ, ಸೀಕೆ, ಮುದುಗುಣಿ, ತಲವಾನೆ, ಅರಳೀಕೊಪ್ಪ, ಕುಂಬತ್ತಿ, ವಾಟುಕೊಡಿಗೆ, ಹಿರೇಗದ್ದೆ, ಸೀಗೋಡು, ಬನ್ನೂರು, ಮಾಗುಂಡಿ, ಕಡಬಗೆರೆ, ಮೇಲ್ಪಾಲ್ ಮುಂತಾದ ಕಡೆಗಳಲ್ಲಿಯೂ ಧಾರಾಕಾರವಾಗಿ ಮಳೆಯಾಗಿದೆ.

ಹಿಂಗಾರು ಮಳೆ ಕಾಫಿ, ಅಡಕೆ, ಭತ್ತ ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಅಕ್ಟೋಬರ್‌ನಲ್ಲಿ ಮಲೆನಾಡಿನ ಬಹುತೇಕ ಕಡೆಗಳಲ್ಲಿ ಅಡಕೆ ಕೊಯ್ಲು ಆರಂಭವಾಗಲಿದ್ದು, ಇದೀಗ ನಿತ್ಯ ಮಳೆಯಿಂದ ಅಡಕೆ ಕೊಯ್ಲಿಗೆ ಹಿನ್ನಡೆಯಾಗಿದೆ. ಭತ್ತಕ್ಕೆ ಕೀಟಬಾಧೆ ಆರಂಭವಾಗುವ ಆತಂಕ ಎದುರಾಗಿದೆ. ಕಾಫಿ, ಕಾಳುಮೆಣಸು ಬೆಳೆಗೂ ಕೊಳೆರೋಗ ಆವರಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net