ಬಾಳೆಲೆಯಲ್ಲಿ ವನಮಹೋತ್ಸವ ಆಚರಣೆ

05 gkl 01
Published on

ಗೋಣಿಕೊಪ್ಪ: ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರಣ್ಯ ಇಲಾಖೆ ಕಲ್ಲಹಳ್ಳ ವಲಯ ಹಾಗೂ ಪ್ರೌಢಶಾಲೆಯ ಪರಿಸರ ಸಂಘದ ಸಹಯೋಗದಲ್ಲಿ ಸಸಿಗಳನ್ನು ನೆಡಲಾಯಿತು.


ವಿದ್ಯಾಸಂಸ್ಥೆ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿ ಸಸಿಗಳನ್ನು ನೆಡುವ ಜತೆಗೆ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.


ಸಂಸ್ಥೆ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ತೇಗದ ತೋಪುಗಳನ್ನು ಬೆಳೆಸುವ ಬದಲಾಗಿ ವಿವಿಧ ಗಿಡಗಳನ್ನು ಬೆಳೆಸಿದರೆ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.


ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಪೊಡಮಾಡ ಮೋಹನ್, ಪ್ರಾಂಶುಪಾಲ ಪ್ರಭು, ಉಪವಲಯ ಅರಣ್ಯ ಅಧಿಕಾರಿಗಳಾದ ಯೋಗೇಶ್, ಬಸಪ್ಪ, ವೀರೇಶ್ ಪಾಟೀಲ್, ಪ್ರೌಢಶಾಲಾ ವಿಭಾಗ ಪರಿಸರ ಸಂಘದ ಸಂಚಾಲಕ ರಾಘವೇಂದ್ರ, ಶಿಕ್ಷಕ ಸುಬ್ಬಯ್ಯ, ತಿಮ್ಮರಾಜು, ಪಡಿಞರಂಡ ಪ್ರಭುಕುಮಾರ್, ಕಿಸಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net