

ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ಐಚಂಡ, ಅಲೆಮಾಡ, ಕಳಕಂಡ, ಕಾಡ್ಯಮಾಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.
ದಿನದ ಮೊದಲ ಪಂದ್ಯದಲ್ಲಿ ಐಚಂಡ ಮತ್ತು ಅಲ್ಲಪಂಡ ತಂಡಗಳು ಸಮಬಲ ಸಾಧಿಸಿದವು. ಐಚಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದರೆ 70ರಲ್ಲಿ ಗಳಿಸಿತು. ನಂತರ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಅಲ್ಲಪಂಡ ಒಂದು ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದರೆ ಈಚಂಡ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿ ಗೆಲವು ಸಾಧಿಸಿತು.
ಮುಂದಿನ ಪಂದ್ಯದಲ್ಲಿ ಆಲೆಮಾಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 81ರನ್ ಗಳಿಸಿತು ಉತ್ತರವಾಗಿ ಗೀಜಿಗಂಡ ತಂಡ ಐದು ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿ ಸೋಲನ್ನು ಅನುಭವಿಸಿತು. ಅಚ್ಚಕಾಳೇರ ತಂಡ ಕಲಕಂಡ ತಂಡದ ವಿರುದ್ಧ 14 ರನ್ ಗಳಿಸಿದರೆ ಕಲ ಕಂಡ ತಂಡ 15 ರನ್ ಗಳಿಸಿ ಗೆಲುವು ಸಾಧಿಸಿತು. ನಾಪನರವಂಡ ವಿರುದ್ಧ ಕಾಡ್ಯಮಾಡ ತಂಡ ಗೆಲುವು ಸಾಧಿಸಿತು. ನಾಪನೆರವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದರೆ, ಕಾಡ್ಯ ಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮೂಕೊಂಡ ತಂಡ ನಂದಿನೆರವಂಡ ತಂಡದ ವಿರುದ್ಧ ಸ್ಪರ್ಧಿಸಿತು. ನಂದಿನೆರವಂಡ ತಂಡ 5 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದರೆ, ಮೂಕೊಂಡ 54 ರನ್ ಗಳಿಸಿ ಐದು ರನ್‌ಗಳ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಅಲೆಮಾಡ ತಂಡ 5 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ವಿರುದ್ಧವಾಗಿ ಆಡಿದ ಐಚಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತು. ಅಲೆಮಾಡ ತಂಡ 35 ರನ್‌ಗಳ ಜಯ ಸಾಧಿಸಿತು.
ಕರಿನೆರವಂಡ ತಂಡ ಎರಡು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಬಲಿಯಮೀದೇರಿರ ತಂಡ ಆರು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತು.ಕಲಕಮಡ ತಂಡ ಚಿಂಡಮಾಡ ತಂಡದ ವಿರುದ್ದ 2 ರನ್‌ಗಳ ಜಯ ಸಾಧಿಸಿತು. ಬೊಜ್ಜಂಗಡ ತಂಡಕ್ಕೆ ಕಾಡ್ಯಮಾಡ ವಿರುದ್ಧ ಗೆಲವು ಲಭಿಸಿತು.ಬೊಜ್ಜಂಗಡ ಐದು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದರೆ, ಕಾಡ್ಯಮಾಡ ತಂಡ ಒಂದು ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು.