ಬಾಲ್ಯವಿವಾಹ ಭವಿಷ್ಯಕ್ಕೆ ಮಾರಕ

11ATHANIGRAMIN1
Published on

ಅಥಣಿ ಗ್ರಾಮೀಣ: ಓದುವ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಿಂದ ಭವಿಷ್ಯ ಹಾಳಾಗುತ್ತದೆ ಆದ್ದರಿಂದ ಪಾಲಕರು ಬಾಲ್ಯ ವಿವಾಹ ಮಾಡಬಾರದು ಎಂದು ತಾಲೂಕು ಆರೋಗ್ಯ ಇಲಾಖೆ ಮೇಲ್ವಿಚಾರಕಿ ಎ.ಬಿ. ಗೂಳೆದಾರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕೊಕಟನೂರ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಅರಿವು ಹಾಗೂ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀದೇವಿ ಬರಡಗಿ ಮಾತನಾಡಿ, ಕೊಕಟನೂರ ಭಾಗದಲ್ಲಿ ೨೫ ಬಾಲ್ಯ ವಿವಾಹಗಳಾಗಿರುವುದು ಪತ್ತೆಯಾಗಿದೆ ಎಂದರು.

ಉಪಪ್ರಾಚಾರ್ಯ ಅನಿಲ ಮೇಲಿನಕೇರಿ ಅಧ್ಯಕ್ಷತೆ ವಹಿಸಿದ್ದರು. ದಾನೇಶ್ವರಿ ನೀಲವೇನಿ, ಅಬ್ದುಲ್ ಹಮೀದ್, ಸಂಗಪ್ಪ ಹಿರೇಕುರಬರ, ಧರೆಪ್ಪ ನೇಮಗೌಡ, ಆರತಿ ಪಾಟೀಲ, ಸಂಜು ಲಮಾಣಿ, ಹೇಮಾ ಆದೆಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net