ಬಾಲ್ಯವಿವಾಹ ಪ್ರಯತ್ನಕ್ಕೆ ಖಂಡನೆ

ctd----adc-one
Published on

ಚಿತ್ರದುರ್ಗ: ಚಳ್ಳಕೆರೆ ತಾಲೂಕು ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಅಪ್ರಾಪ್ತ ಬಾಲಕಿ ವಿವಾಹ ಯತ್ನ ಖಂಡಿಸಿ ಮಕ್ಕಳು, ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ನಕ್ಷತ್ರ ಕಿಶೋರಿಯರ ಪಾರ್ಲಿಮೆಂಟ್ ಕಾರ್ಯಕರ್ತರು ಎಡಿಸಿ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಿದರು.

ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರದ ಆಡಳಿತ ವೈಫಲ್ಯಕ್ಕೆ ಇವು ಸಾಕ್ಷಿಯಾಗಿವೆ. ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ವಿವಾಹ ಮಾಡಿಸಲು ಮುಂದಾಗಿದ್ದನ್ನು ಬಾಲಕಿ ಪ್ರತಿಭಟಿಸಿ ಸಾಹಸ ಮೆರೆದಿದ್ದಾಳೆ. ಈ ಪ್ರಕರಣ ಸಂಬಂಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದರೂ ಬಾಲ್ಯವಿವಾಹಗಳು ನಿಂತಿಲ್ಲ. ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಇತರೆ ಸಂಘ ಸಂಸ್ಥೆಗಳು ಬಾಲ್ಯವಿವಾಹ ಅಕ್ಷಮ್ಯ ಅಪರಾಧವೆನ್ನುವ ಜಾಗೃತಿ ಮೂಡಿಸಿ ದೂರು ದಾಖಲು ಮಾಡುತ್ತಿದ್ದರೂ ಈ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯಸಾಗರ್, ಬೀಬಿಜಾನ್, ಸ್ಫೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net