ಬಾಲ್ಯದಿಂದಲೇ ಸಂಸ್ಕಾರ ನೀಡಲಿ

10ATHANIGRAMIN2
Published on

ಅಥಣಿ ಗ್ರಾಮೀಣ: ಮಕ್ಕಳಿಗೆ ಪಾಲಕರು ಬಾಲ್ಯದಿಂದಲೇ ಸಂಸ್ಕಾರದ ಜತೆಗೆ ಉತ್ತಮ ಮೌಲ್ಯ ತಿಳಿಸಿಕೊಡಬೇಕು ಎಂದು ಮಾಂಜರಿ ಹಾಗೂ ಕೊಕಟನೂರ ಕಾಡಸಿದ್ಧೇಶ್ವರಮಠದ ಗುರುಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ಶ್ರೀ ಪೂರ್ಣಬ್ರಹ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಳಿಕ ಮುನವಳ್ಳಿ ಕುಮಾರೇಶ್ವರ ವೇದ ಸಂಸ್ಕೃತ ಪಾಠಶಾಲೆ ಶಿಕ್ಷಕ ಶೇಷಗಿರಿ ಭಟ್ಟ ಅವರು ಮಕ್ಕಳಿಗೆ ಅಕ್ಷರಾಭ್ಯಾಸ ಸಂಸ್ಕಾರ ನೆರವೇರಿಸಿದರು.

ಸಂಸ್ಥೆಯ ಅಧ್ಯಕ್ಷ ಬಸವೇಶ್ವರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ ಜೋಶಿ, ಚಿದಂಬರ ಜೋಶಿ, ಎಂ.ಎ. ಬಡಿಗೇರ, ಅನಂತರಾವ ಜೋಶಿ, ಪರಮಾನಂದ ಗುರವ, ಕೀರ್ತಿ ಜೋಶಿ, ಅರುಣ ಮಾಳಿ, ರಾಜಕುಮಾರ ದಳವಾಯಿ, ಪ್ರಶಾಂತ ಮಾಳೆದಕರ, ನಾರಾಯಣ ದಾಮಾಪುರ, ಶ್ರೀಶೈಲ ಹಿರೇಮಠ, ರಂಜನಾ ಭೋಸಲೆ, ರೇಣುಕಾ ವಾಘಮೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net