

ಚಾಮರಾಜನಗರ: ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿಗೆ ಸುಮಾರು 27 ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ನೆರವೇರಿಸಿದ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ 1098ಗೆ ದೂರು ದಾಖಲಾಗಿದ್ದು, ಈ ಸಂಬಂಧ ಬಾಲಕಿಯ ಮನೆ ಭೇಟಿ ಮಾಡಿದ ಅಧಿಕಾರಿಗಳು ವಿವಾಹವು ನೆರವೇರಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಾಲ್ಯವಿವಾಹವನ್ನು ನೆರವೇರಿಸಿದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಕಲಂ 9 1, 11 ರಂತೆ ಯುವಕ (ಎ-1) ಯುವಕನ ತಂದೆ (ಎ-2) ಯುವಕನ ತಾಯಿ (ಎ-3) ಅಪ್ರಾಪ್ತ ಬಾಲಕಿಯ ತಂದೆ (ಎ-4), ಅಪ್ರಾಪ್ತ ಬಾಲಕಿಯ ತಾಯಿ (ಎ-5) ಅಪ್ರಾಪ್ತ ಬಾಲಕಿಯ ಸಂಬಂಧಿಕರು (ಎ-6, ಮತ್ತು ಎ-7) ಬಾಲ್ಯವಿವಾಹ ನೆರವೇರಿಸಿಕೊಟ್ಟ ಪೂಜಾರಿ (ಎ-8) ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ-1098 ಸಂಯೋಜಕರು ಪ್ರಕರಣ ದಾಖಲಿಸಿದ್ದಾರೆ.