

ಮೈಸೂರು: ಬಾಲ್ಯ ವಿವಾಹ ಪ್ರಕರಣ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಗರದ ನಿವಾಸಿಯೊಬ್ಬರ ಪುತ್ರಿಯಾದ ಅಪಾಪ್ತ ಬಾಲಕಿಯನ್ನು ನಾರಾಯಣ ಎಂಬಾತನಿಗೆ ದೇವಾಲಯದಲ್ಲಿ ಮದುವೆ ಮಾಡಿಕೊಡಲಾಗಿತ್ತು.
ಮಕ್ಕಳ ಕಲ್ಯಾಣ ಸಮಿತಿಗೆ ಈ ಕುರಿತು ದೂರು ಸಲ್ಲಿಕೆಯಾಗಿತ್ತು. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಬಾಲ್ಯವಿವಾಹ ನಡೆದಿರುವುದು ಕಂಡುಬಂತು.
ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ವಿವಾಹವಾದ ನಾರಾಯಣ ಹಾಗೂ ಬಾಲಕಿಯ ಮದುವೆ ಮಾಡಿಸಿದ್ದ ತಂದೆ, ತಾಯಿ ಹಾಗೂ ಸಂಬಂಧಿಗಳ ವಿರುದ್ಧ ಎನ್.ಆರ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.