ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಡ್ಯ ಚಾಂಪಿಯನ್

IMG-20241217-WA0058
Published on

ಚಾಮರಾಜನಗರ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ 14 ರಿಂದ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫಲಿತಾಂಶದ ವಿವರ ಇಂತಿದೆ.

ಪಂದ್ಯಾವಳಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಎಂಟು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನದಿಂದ ನಾಲ್ಕು ವಯೋಮಿತಿ ವಿಭಾಗಗಳಲ್ಲಿ ಒಟ್ಟು 32 ತಂಡಗಳು ಭಾಗವಹಿಸಿದ್ದವು.

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಂತಿಮ ಹಂತಕ್ಕೆ ಮೈಸೂರು ಮತ್ತು ಮಂಡ್ಯ ಪ್ರವೇಶ ಪಡೆದು ಮಂಡ್ಯ ಜಿಲ್ಲೆಯ ತಂಡ 35-25 ಮತ್ತು 35-22 ರಲ್ಲಿ ವಿಜಯಶಾಲಿಯಾಯಿತು. 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮಂಡ್ಯ ಮತ್ತು ಚಿಕ್ಕಮಗಳೂರು ಅಂತಿಮ ಹಂತಕ್ಕೆ ಪ್ರವೇಶ ಪಡೆದು 35-27 ಮತ್ತು 35-27ರಲ್ಲಿ ಮಂಡ್ಯ ಜಿಲ್ಲೆಯ ತಂಡ ವಿಜಯಶಾಲಿಯಾಯಿತು.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಂಡ್ಯ ಮತ್ತು ಮೈಸೂರು ಅಂತಿಮ ಹಂತಕ್ಕೆ ಆಯ್ಕೆಯಾಯಿತು, ಅಂತಿಮ ಹಂತದಲ್ಲಿ ಮಂಡ್ಯ 35-16 ಮತ್ತು 35-26 ರಲ್ಲಿ ವಿಜಯಶಾಲಿಯಾಯಿತು. 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಮತ್ತು ಮಂಡ್ಯ ಅಂತಿಮ ಹಂತಕ್ಕೆ ಆಯ್ಕೆಯಾಗಿ 35-29, 33-35 ಮತ್ತು 35-31 ರಲ್ಲಿ ದಕ್ಷಿಣ ಕನ್ನಡ ವಿಜಯಶಾಲಿಯಾಯಿತು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net