ಬಾಲಮ್ಮ ಮಂದಿರದ ಕಳಸಾರೋಹಣ

24 hbd 01 (2)
Published on

ಚಿಟಗುಪ್ಪ: ನಾಡಹಬ್ಬ ದಸರಾ ಮಹೋತ್ಸವದ ಆಯುಧ ಪೂಜೆ ದಿನದಂದು ಕಳಸಾರೋಹಣದಿಂದ ವಿಶ್ವಶಾಂತಿ ಮತ್ತು ಲೋಕಕಲ್ಯಾಣ ಆಗಲಿದೆ ಎಂದು ಬೇಮಳಖೇಡದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.

ಮನ್ನಾಎಖೇಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಬಾಲಮ್ಮ ದೇವಿ ಮಂದಿರದ ನೂತನ ಗೋಪುರದ ಕಳಸಾರೋಹಣದ ಸಾನ್ನಿಧ್ಯ ವಹಿಸಿ ಮಾತನಾಡಿ, ದೇವಾಲಯ ಪರಿಪೂರ್ಣವಾಗಿ ಭಕ್ತರಿಗೆ ವರ ದೊರೆಯಬೇಕಾದರೆ ದೇವಾಲಯಕ್ಕೆ ಗೋಪುರ, ಕಳಸಾರೋಹಣ ನೆರವೇರಿಸಬೇಕು. ಕಳಸಾರೋಹಣ ಪರಮ ಪವಿತ್ರ ಕಾರ್ಯ. ಇದನ್ನು ನೋಡುವುದೇ ಒಂದು ಭಾಗ್ಯ. ಕಳಸಾರೋಹಣದ ಪವಿತ್ರ ಕಾರ್ಯದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡವರಿಗೆ ಜೀವನದಲ್ಲಿ ಎಲ್ಲ ಕಷ್ಟ ನಾಶವಾಗುತ್ತವೆ ಎಂದರು.

ಸೊಂತ ಮತ್ತು ಕಲ್ಮೂಡದ ಶ್ರೀ ಶರಣ ಶಂಕರಲಿಂಗ ಮಹಾರಾಜರು ಮಾತನಾಡಿ, ಕಳಸಾರೋಹಣ ಪವಿತ್ರ ಕಾರ್ಯವಾಗಿದೆ. ಅದು ದಿಗ್ವಿಜಯ ಪ್ರತೀಕವಾಗಿದೆ. ಎಲ್ಲ ಭಕ್ತರಿಗೆ ಸುಖ, ಶಾಂತಿ ಸಿಗಲಿ ಎಂದು ಶುಭ ಹಾರೈಸಿದರು.

ಸುಲೇಪೇಟ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಅಪಾರ ಭಕ್ತರನ್ನು ಹೊಂದಿರುವ ಮಂದಿರದ ನೂತನ ಕಳಸಾರೋಹಣದಿಂದ ಹೊಸ ಶಕ್ತಿ ಬರಲಿದೆ. ಎಲ್ಲರಿಗೂ ದೇವಿ ಸುಖ, ಶಾಂತಿ, ಸಮೃದ್ಧಿ ಕಲ್ಪಿಸಲಿ. ಅಧ್ಯಾತ್ಮ ಚಿಂತನೆಯಲ್ಲಿ ಎಲ್ಲರೂ ಸಾಗಲಿ ಎಂದರು.
ಬಸವ ಮಹಾಮಠದ ಮಾತೆ ಮೈತ್ರಾದೇವಿ ಆಶೀರ್ವಚನ ನೀಡಿದರು. ಶ್ರೀಗಳ ಸಾನ್ನಿಧ್ಯದಲ್ಲಿ ಮಂದಿರದಲ್ಲಿ ದೇವಿಗೆ ಹಾಗೂ ಕಳಸಕ್ಕೆ ಪೂಜಾ ವಿಧಿವಿಧಾನಗಳು ಜರುಗಿದವು. ಕಳಸ ದಾನಿ ಪುಂಡಲಿಕ ನಿಂಗನಬಡ ದಂಪತಿ ಕಳಸಾರೋಹಣ ಹಾಗೂ ಪ್ರಸಾದ ಸೇವೆ ಸಲ್ಲಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಹಣಮಂತಪ್ಪ ಮರಕುಂದ, ಉಪಾಧ್ಯಕ್ಷ ಆನಂದ ಮರಕುಂದ, ಗ್ರಾಪಂ ಅಧ್ಯಕ್ಷ ರಾಜಕುಮಾರ ಅಗಸಿ, ಪ್ರಮುಖರಾದ ಸಂತೋಷ ರಾಸೂರ, ರಮೇಶ ಡಾಕುಳಗಿ, ಸಂತೋಷ ಹಳ್ಳಿಖೇಡ, ಸಂತೋಷ ಕಮಲಪುರ, ಶಂಕರ ಪಂಡಿತ, ಶೋಭಾ ಕ್ಯಾತ, ರೇವಣಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ ಹಳ್ಳಿಖೇಡ, ಈಶ್ವರ ಬಸರಡ್ಡಿ, ವೈಜನಾಥ ಬಗದಲ್, ಪ್ರದೀಪ ಜಾವಳಗಿ, ಪ್ರಶಾಂತ ಜಾವಳಗಿ, ಝರೆಪ್ಪ ಹುಣಸಗೇರಿ, ಸುನೀಲ ಭಂಡಾರಿ, ಡಾ.ಮಲ್ಲಿಕಾರ್ಜುನ ಮರಕುಂದ, ರಮೇಶ ಕ್ಯಾತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net