

ಚಿಟಗುಪ್ಪ: ಬಾಲಮ್ಮ ದೇವಿ ಮಹಿಮೆ ಅಪಾರ. ಮನ್ನಾಎಖ್ಖೇಳ್ಳಿಯಲ್ಲಿ ನನ್ನ ಬಾಲ್ಯದ ದಿನಗಳನ್ನು ಇಲ್ಲಿನ ಜನರೊಂದಿಗೆ ಕಳೆದಿರುವೆ. ಬೀದರ್ ದಕ್ಷಿಣ ಕ್ಷೇತ್ರದ ಎಲ್ಲ ಸಮಾಜ, ಮಠ ಮಂದಿರ ಸೇರಿ ಎಲ್ಲ ಭಕ್ತಿ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮನ್ನಾಎಖ್ಖೇಳ್ಳಿ ಗ್ರಾಮದ ಪ್ರಸಿದ್ಧ ಬಾಲಮ್ಮ ದೇವಿ ಮಂದಿರದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲು ಶ್ರಮಿಸಲಾಗುತ್ತಿದೆ ಎಂದರು.
ಡಾ.ರಾಜಶೇಖರ ಶಿವಾಚಾರ್ಯರು ಶ್ರೀ ದುರ್ಗಾದೇವಿ ದರ್ಶನ ಪ್ರವಚನ ನೀಡಿದರು. ಮಲ್ಲಿಕಾರ್ಜುನ ದೇವಗಿರಿ ಸಂಗೀತಕ್ಕೆ ನವಲಿಂಗ ಪಾಟೀಲ್ ತಬಲಾ ಸಾಥ್ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಹಣಮಂತಪ್ಪ ಮರಕುಂದ ಇತರರಿದ್ದರು.