ಬಾಲಕಿಯರ ನಡವಳಿಕೆ ಗಮನಿಸಲಿ

8RAM1
Published on

ರಾಮದುರ್ಗ: ತಂದೆ-ತಾಯಿಗಳು ಮಕ್ಕಳ ನಡವಳಿಕೆಗಳ ಬಗ್ಗೆ ಗಮನ ಹರಿಸದೆ ಇರುವುದರಿಂದ ಹದಿ ಹರೆಯದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಉದ್ಯಮಿ ಜಮುನಾ ಪಟ್ಟಣ ಹೇಳಿದರು.

ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತರಾಷ್ತ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಎಸ್‌ಐ ಸವಿತಾ ಮುನ್ಯಾಳ ಮಾತನಾಡಿ, ಸಂಕಷ್ಟದಲ್ಲಿರುವ ಬೇರೆ ಹೆಣ್ಣಿನ ರಕ್ಷಣೆಗೆ ನಾವು ಸದಾಕಾಲ ನಿಲ್ಲಬೇಕು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಕ್ಕ ಮಾದರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ದಾನಮ್ಮ ಗುಂಜಗಾವಿ, ಎಸ್.ಎಂ. ವಾಲಿ, ದಂತ ವೈದ್ಯೆ ತಜೀನ್ ಸಹೇರ, ಅರ್ಚನಾ ಬಿರಾದಾರ, ಅಲ್ಕಾ ಧೂತ, ಪ್ರಿಯಾ ಸರದೇಶಪಾಂಡೆ, ಆರ್. ಮಂಜುಳಾ, ದಾನಮ್ಮ ಗೋಕಾವಿ, ಶಿವಲೀಲಾ ಬಾಗೇವಾಡಿ, ರಾಜಶ್ರೀ ಬಟಕುರ್ಕಿ, ರಾಣಿ ಪಾಟೀಲ, ಶಾಖಾ ವ್ಯವಸ್ಥಾಪಕ ಹನಮಂತ್ರಾಯ ಬಿರಾದಾರ, ವುಡಿಮುಡಿ ಶಿವಕುಮಾರ ನಿ ರಾಜೇಶ್ವರಿ ಮ್ಯಾಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net