ಬಾಲಕಿಗೆ ನಿವೃತ್ತ ಶಿಕ್ಷಕ ನೆರವು

Published on

ಚಾಮರಾಜನಗರ: ತಾಲೂಕಿನ ಅಂಕಶೆಟ್ಟಿಪುರ ಗ್ರಾಮದಲ್ಲಿ ಅಪರೂಪದ ಕಾಯಿಲೆ ಥಲಸ್ಸೆಮಿಯಾದಿಂದ ಬಳಲುತ್ತಿರುವ ಆದ್ಯಾಗೆ ಹೆಬ್ಬಸೂರು ಗ್ರಾಮದ ನಿವೃತ್ತ ಶಿಕ್ಷಕ ವಿ.ರಾಜೇಂದ್ರ ಆರ್ಥಿಕ ನೆರವು ನೀಡಿದರು.

ಮಹದೇವಸ್ವಾಮಿ ಮಗಳಾದ 9 ವರ್ಷದ ಆದ್ಯಾ ಮೂಳೆ ಸಂಬಂಧಿತ ಅಪರೂಪದ ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇವಳಿಗೆ ಪ್ರತಿ ಮೂರು ವಾರಕ್ಕೊಮ್ಮೆ ರಕ್ತವನ್ನು ನೀಡಬೇಕು. ಸದ್ಯ ಇವಳು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿರುತ್ತದೆ. ಚಿಕಿತ್ಸೆಗೆ ಸುಮಾರು 40 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಗೆ ದಾನಿಗಳ ನೆರವುಬೇಕಿದ್ದ ಹಿನ್ನೆಲೆಯಲ್ಲಿ ವಿ.ರಾಜೇಂದ್ರ ಪ್ರಸಾದ್ 5 ಸಾವಿರ ರೂ.ಗಳನ್ನು ನೀಡಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಆದ್ಯಾಳ ತಂದೆ ಮಹದೇವಸ್ವಾಮಿ ಅವರ ಮೊ: 9731739777ಗೆ ಸಂಪರ್ಕಿಸಿ ಮಗುವಿನ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net