ಬಾಲಕಿ ಬಾವಿಗೆ ಬಿದ್ದು ಸಾವು

Anushree
Published on

ಶಿರಸಿ:ಬಾಲಕಿಯೋರ್ವಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಗರದ ಸಿಪಿ ಬಝಾರ್‌ನಲ್ಲಿ ನಡೆದಿದೆ.
ಅನುಶ್ರೀ ರಾಜಶೇಖರ ಶೆಟ್ಟರ್ (2) ಮೃತ ಬಾಲಕಿ.
ತಾಯಿಯ ಜತೆ ನೀರು ತರಲು ತೆರಳಿದ್ದ ಬಾಲಕಿ ಆಟವಾಡುತ್ತ ಬಾವಿಗೆ ಬಿದ್ದಿದ್ದಾಳೆ. ಸ್ಥಳೀಯರು ಬಾವಿಗಿಳಿದು ಮೇಲೆತ್ತುವ ಹೊತ್ತಿಗೆ ಮಗು ಕೊನೆಯುಸಿರೆಳೆದಿತ್ತು. ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net